ಮಡಿಕೇರಿ, ಜೂ. 3: ಕೊಡಗಿನ ಪ್ರತಿಷ್ಠಿತ ಸಹಕಾರ ಸಂಸ್ಥೆ ಯಾಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2021ಕ್ಕೆ ತನ್ನ ಶತ ಮಾನೋತ್ಸವ ಕಾಣುತ್ತಿದೆ. ಈ ದಿಸೆಯಲ್ಲಿ ಬ್ಯಾಂಕ್ ಆಡಳಿತ ಮಂಡಳಿಯು, ನೂತನ ಶತಮಾನೋತ್ಸವ ಭವನಕ್ಕೆ ಸಿದ್ಧತೆಯಲ್ಲಿ ತೊಡಗಿದೆ.

ಪ್ರಸ್ತುತ ಕಾರ್ಯನಿರ್ವ ಹಿಸುತ್ತಿದ್ದ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಹಳೆಯ ಕಟ್ಟಡ ಹಾಗೂ ಅತಿಥಿಗೃಹವನ್ನು ತೆರವುಗೊಳಿಸುವ ಕೆಲಸ ಆರಂಭಗೊಂಡಿದೆ. ಈ ಕಟ್ಟಡವಿದ್ದ ಸ್ಥಳದಲ್ಲಿ ಅಂದಾಜು ರೂ. 10 ಕೋಟಿ ವೆಚ್ಚದಲ್ಲಿ ನೂತನ ಸಂಕೀರ್ಣ ಕಟ್ಟಡ ತಲೆಯೆತ್ತಲಿದೆ. ಆ ದಿಸೆಯಲ್ಲಿ ತಯಾರಿ ನಡೆದಿದ್ದು, 2021ರ ಮಳೆಗಾಲಕ್ಕೆ ಮುನ್ನ ಈ ಶತಮಾನೋತ್ಸವ ಕಟ್ಟಡ ಪೂರ್ಣಗೊಳ್ಳಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅಭಿಪ್ರಾಯಪಟ್ಟಿದ್ದಾರೆ.