*ಗೋಣಿಕೊಪ್ಪಲು : ಲಾಕ್‍ಡೌನ್ ವ್ಯವಸ್ಥೆಯಿಂದ ಬಹಳಷ್ಟು ಬಡ ಮತ್ತು ಮಧ್ಯಮ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಬಳಲುತ್ತಿವೆ. ಇಂತಹ ಕುಟುಂಬಗಳನ್ನು ಗುರುತಿಸಿ ಅವರ ಸಂಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸಲಾಗುತ್ತಿದ್ದು, ಅಗತ್ಯ ದಿನಸಿ ಪದಾರ್ಥಗಳನ್ನು ನೀಡುವ ಮೂಲಕ ಅವರ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.

ಪೆÇನ್ನಂಪೇಟೆ ತಾಲೂಕು ಪಂಚಾಯಿತಿ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದಿನಸಿ ಪದಾರ್ಥಗಳನ್ನು ವಿತರಿಸಿ ಮಾತನಾಡಿದರು.

ಬಹಳ ಸಂಕಷ್ಟದಲ್ಲಿದ್ದರೂ ಕೆಲವು ಕುಟುಂಬಗಳು ಗುರುತಿಗೆ ಸಿಗುತ್ತಿಲ್ಲ. ಇಂತಹವರನ್ನು ಇಲಾಖೆಯ ಅಧಿಕಾರಿಗಳು ಗುರುತಿಸಿ ಪರಿಹಾರ ನೀಡಲು ಸ್ಪಂದಿಸಬೇಕಾಗಿದೆ. ಜೂನ್ 30ರವರೆಗೆ ಪ್ರಧಾನಮಂತ್ರಿಯವರ ಆದೇಶದಂತೆ ಕೆಲವು ನಿರ್ಬಂಧಗಳೊಂದಿಗೆ ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ತಾಲೂಕಿನ ಪರಿಶಿಷ್ಟ ವರ್ಗ ಮತ್ತು ಪಂಗಡದ ಅಧೀನದಲ್ಲಿರುವ ಆಶ್ರಮ ಶಾಲೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸುಮಾರು 64 ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಆಹಾರ ಪದಾರ್ಥಗಳನ್ನು ವಿತರಿಸಿದರು. ಇದೇ ಸಂದರ್ಭ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ವಿಶೇಷ ಚೇತನರು ಮತ್ತು ವಿಧವೆಯರನ್ನು ಗುರುತಿಸಿ ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳಿಗೆ ಪಾತ್ರೆ, ಕಂಬಳಿ, ಸ್ಯಾನಿಟೈಸರ್, ಸಾಬೂನು ಸೇರಿದಂತೆ ದಿನಬಳಕೆಯ ವಸ್ತುಗಳನ್ನು ನೀಡಿದರು.

ಮಳೆಗಾಲದಲ್ಲಿ ಸಂಕಷ್ಟಕ್ಕೆ ಒಳಗಾಗುವ ನಾಗರಹೊಳೆ ಅರಣ್ಯ ವ್ಯಾಪ್ತಿಯ ಹಾತೂರು, ತಿತಿಮತಿ, ನಿಟ್ಟೂರು, ಕೆ.ಬಾಡಗ, ಅರುವತ್ತೊಕ್ಲು, ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 915 ಹಾಡಿ ನಿವಾಸಿಗಳಿಗೆ ಟಾರ್ಪಲ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭ ತಾಲೂಕು ತಹಶೀಲ್ದಾರ್ ನಂದೀಶ್, ಜಿಲ್ಲಾ ಐ.ಟಿ.ಡಿ.ಪಿ ಇಲಾಖೆ ಅಧಿಕಾರಿ ಶಿವಕುಮಾರ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಗುರುಶಾಂತಪ್ಪ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಗಡ ಮಧು ದೇವಯ್ಯ ಹಾಜರಿದ್ದರು. ನಾಪೆÇೀಕ್ಲು : ತಾಮರ ಲೀಷರ್ ಎಕ್ಸ್‍ಪೀರಿಯನ್ಸ್ ಸಂಸ್ಥೆ ವತಿಯಿಂದ ಕಕ್ಕಬ್ಬೆ ಪ್ರೌಢಶಾಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸಂತು ಸುಬ್ರಮಣಿ, ಸಂಸ್ಥೆಯ ಮುಖ್ಯಸ್ಥ ಪಾಲೆಕಂಡ ಸಾಯಿ ಕರುಂಬಯ್ಯ, ವ್ಯವಸ್ಥಾಪಕ ಕಲ್ಯಾಟಂಡ ಗಿರೀಶ್ ಹೆಚ್.ಆರ್. ವ್ಯವಸ್ಥಾಪಕ ಅರಮಣಮಾಡ ದಿಲೀಪ್ ದೇವಯ್ಯ ಇದ್ದರು.ಮಡಿಕೇರಿ: ಮಡಿಕೇರಿಯ ಪುಟಾಣಿ ನಗರ ಬಡಾವಣೆಯ ಬಡ ಕೂಲಿ ಕಾರ್ಮಿಕರು, ದಿನಗೂಲಿ ನೌಕರರ ಕುಟುಂಬಗಳಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಖಜಾಂಚಿ ಮತ್ತು ನಗರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಪ್ರಾಯೋಜಕತ್ವದಲ್ಲಿ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ. ಪಿ. ಸುರೇಶ್, ನಗರಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ, ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಪ್ರಭುರೈ, ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಜ್ಜಳ್ಳಿ ರವಿ, ಬ್ಲಾಕ್ ಸಂಘಟನಾ ಕಾರ್ಯದರ್ಶಿ ಮುನೀರ್‍ಮಾಚಾರ್, ಯುವ ಕಾಂಗ್ರೆಸ್ ನಗರಾಧ್ಯಕ್ಷ ಮಂಡೀರ ಸದಾ ಮುದ್ದಪ್ಪ, ನಗರ ಕಾಂಗ್ರೆಸ್ ಮುಖಂಡ ರವಿಗೌಡ, ಮಹಿಳಾ ಕಾಂಗ್ರೆಸ್ ಮುಖಂಡರಾದ ಮಿನಾಜ್ ಪ್ರವೀಣ್, ಸ್ವರ್ಣಲತಾ, ಪೂರ್ಣಿಮಾ ಸೇರಿದಂತೆ ಮಡಿಕೇರಿ ಬ್ಲಾಕ್ ಮತ್ತು ನಗರ ಕಾಂಗ್ರೆಸ್‍ನ ಪದಾಧಿಕಾರಿಗಳು ಹಾಜರಿದ್ದರು.

ಸೋಮವಾರಪೇಟೆ : ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಜಿಲ್ಲಾಡಳಿತದಿಂದ ಸಮಾಜ ಕಲ್ಯಾಣ ಇಲಾಖೆ ಮೂಲಕ ಅಗತ್ಯ ಆಹಾರ ಸಾಮಗ್ರಿಯ ಕಿಟ್‍ಗಳನ್ನು ವಿತರಿಸಲಾಯಿತು. ಶಾಸಕ ಅಪ್ಪಚ್ಚು ರಂಜನ್ ಅವರು ತಮ್ಮ ಕಚೇರಿ ಆವರಣದಲ್ಲಿ 80 ಮಂದಿ ಫಲಾನುಭವಿಗಳಿಗೆ ಕಿಟ್ ವಿತರಿಸಿ ಮಾತನಾಡಿ, ಸಾರ್ವಜನಿಕರ ಸಹಕಾರದೊಂದಿಗೆ ಜಪಾನ್‍ನಲ್ಲಿ ಕೊರೊನಾ ವಿರುದ್ಧ ಹಿಡಿತ ಸಾಧಿಸಲಾಗಿದೆ. ಭಾರತದಲ್ಲಿ ಲಾಕ್‍ಡೌನ್ ಸಡಿಲಿಕೆಯಿದ್ದರೂ ಸಹ ಸಾರ್ವಜನಿಕರು ಕೊರೊನಾ ಬಗ್ಗೆ ಜಾಗ್ರತೆ ವಹಿಸಬೇಕಿದೆ. ಮಾಸ್ಕ್ ಧರಿಸುವದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು. ತಹಶೀಲ್ದಾರ್ ಗೋವಿಂದರಾಜು, ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಶೇಖರ್, ಸಿಬ್ಬಂದಿ ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ವೀರಾಜಪೇಟೆ : ಕೊರೊನಾ ವೈರಸ್ ನಿರ್ಬಂಧದಿಂದ ಸಂತ್ರಸ್ತರಾಗಿರುವ ವೀರಾಜಪೇಟೆ ಪಟ್ಟಣ ಸುತ್ತಮುತ್ತಲಿನ ಪ್ರದೇಶದ ದೇವಾಲಯ ಗಳಲ್ಲಿ ಪೂಜೆ ಮಾಡುವ ಅರ್ಚಕರಿಗೆ ತಾಲೂಕು ಆಡಳಿತದಿಂದ ಪಡಿತರ ಆಹಾರ ಸಾಮಗ್ರಿಗಳ ಕಿಟ್‍ನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ. ಜಿ. ಬೋಪಯ್ಯ ವಿತರಿಸಿದರು. ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ. ಎಂ. ಶ್ರೀಧರ್ ಮತ್ತಿತರರು ಹಾಜರಿದ್ದರು.ಮಡಿಕೇರಿ: ಅನಾರೋಗ್ಯದಿಂದ ಬಳಲುತ್ತಿರುವ ವೀರಾಜಪೇಟೆ ತಾಲೂಕು ವ್ಯಾಪ್ತಿಯ ಬಿ.ಶೆಟ್ಟಿಗೇರಿಯ ಕುಟುಂಬಕ್ಕೆ ಮುಂಬೈ ಉದ್ಯಮಿ ಅಕ್ಕಳತಂಡ ಮೊಯ್ದು (ಮೊಯ್ದು ಕೂರ್ಗ್) ಆರ್ಥಿಕ ನೆರವು ನೀಡಿದ್ದಾರೆ. ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ ಪತಿ-ಪತ್ನಿ ಸಮಸ್ಯೆ ಬಗ್ಗೆ ಮಾಧ್ಯಮ ಸ್ಪಂದನದ ಗಮನವನ್ನು ಪತ್ರಕರ್ತ ಅಣ್ಣೀರ ಹರೀಶ್ ಮಾದಪ್ಪ ಸೆಳೆದಿದ್ದರು.

ಕೆ. ಕೆ. ಯಶೋದ-ಸಣ್ಣಪ್ಪ ದಂಪತಿ ಸಂಕಷ್ಟಕ್ಕೆ ಸಿಲುಕಿರುವವರು. ಅನಾರೋಗ್ಯದಿಂದ ಇವರ ಮಗಳು ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆ ವೈದ್ಯರ ಮಾರ್ಗದರ್ಶನ ದಡಿ ಗೋಣಿಕೊಪ್ಪ ಖಾಸಗಿ ಮೆಡಿಕಲ್ ಶಾಪ್‍ನಲ್ಲಿ ಮಾಸಿಕ 2,000 ರೂಪಾಯಿಗೆ ಔಷಧಿ ಖರೀದಿಸುತ್ತಿದ್ದರು. ವೀರಾಜಪೇಟೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಯತಿರಾಜ್ ಅವರೊಂದಿಗೆ ಮಾಧ್ಯಮ ಸ್ಪಂದನದ ಅಜ್ಜಮಾಡ ರಮೇಶ್ ಕುಟ್ಟಪ್ಪ ಗಮನ ಸೆಳೆದ ಬಳಿಕ ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿದರು.

2,000 ರೂಪಾಯಿಗೆ ಖರೀದಿಸುತ್ತಿದ್ದ ಔಷÀಧಿ ಜನತಾ ಔಷÀಧಿ ಮಳಿಗೆಯಲ್ಲಿ 500 ರೂಪಾಯಿಗೆ ಸಿಗುತ್ತಿರುವುದನ್ನು ಪತಿ- ಪತ್ನಿಗೆ ಮನವರಿಕೆ ಮಾಡಿಕೊಟ್ಟರು. ತಾಲೂಕು ಆರೋಗ್ಯ ರಕ್ಷಾ ಸಮಿತಿ ಮೂಲಕ ಅಗತ್ಯ ಔಷÀಧಿ ಖರೀದಿಸಿ ನೀಡುವ ಭರವಸೆ ನೀಡಿದರು. ಅಗತ್ಯ ಔಷÀಧಿü ಖರೀದಿಗೆ ರಮೇಶ್ ಕುಟ್ಟಪ್ಪ ಮನವಿ ಮೇರೆ ಅಕ್ಕಳತಂಡ ಮೊಯ್ದು 15 ಸಾವಿರ ರೂಪಾಯಿ ಯಶೋದ ಅವರ ಖಾತೆಗೆ ಜಮೆ ಮಾಡಿದ್ದಾರೆ.ಮಡಿಕೇರಿ : ಮಾಧ್ಯಮ ಸ್ಪಂದನ ತಂಡದಿಂದ ಸಂಗ್ರಹಿಸಲಾಗಿದ್ದ ಆಹಾರ ಕಿಟ್ ಅನ್ನು 21 ವೃದ್ಧರಿಗೆ ಆಶ್ರಯ ನೀಡಿರುವ ಶಕ್ತಿ ವೃದ್ಧಾಶ್ರಮಕ್ಕೆ ನೀಡಲಾಯಿತು.

ಪೂನಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಮೇಜರ್ ಡಾ.ಕುಶ್ವಂತ್ ಕೋಳಿಬೈಲು, ಕಿರುಚಿತ್ರ ನಿರ್ಮಾಪಕ ಉಮಾಶಂಕರ್, ದುಬೈಯಲ್ಲಿರುವ 7ನೇ ಹೊಸಕೋಟೆಯ ಯಾಯ (ಯುವರಾಜ), ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ದೇವರು, ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಚಂದ್ರಶೇಖರ್, ಮಕ್ಕಂದೂರಿನ ಸುವರ್ಣ ಕಾಫಿ ಮಾಲೀಕ ಬಿ.ಎನ್. ರಮೇಶ್, ಹೆಸರು ಬಹಿರಂಗ ಪಡಿಸಬಾರದೆಂಬ ಷರತ್ತಿನೊಂದಿಗೆ ಕಾಂಗ್ರೆಸ್ ಮುಖಂಡರೊಬ್ಬರು ನೀಡಿದ ಸಹಾಯವನ್ನು ಹಸ್ತಾಂತರಿಸಲಾಯಿತು.

ಮಾಧ್ಯಮ ಸ್ಪಂದನ ತಂಡದ ವಿಶ್ವ ಕುಂಬೂರು ಕಿಟ್ ಅನ್ನು ವೃದ್ಧಾಶ್ರಮದ ವ್ಯವಸ್ಥಾಪಕ ಸತೀಶ್ ಅವರಿಗೆ ಹಸ್ತಾಂತರಿಸಿದರು.