ಪೆÇನ್ನಂಪೇಟೆ, ಜೂ. 2: ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಮಾಸಿಕ ಸಭೆ ಟಿ. ಶೆಟ್ಟಿಗೇರಿಯ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಕಟ್ಟೇರ ಎ. ವಿಶ್ವನಾಥ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾಜಿ ಸೈನಿಕರು ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು. ಮಾಜಿ ಸೈನಿಕರ ಮನೆ ಮತ್ತು ನೀರಿನ ಕಂದಾಯಗಳಿಗೆ ಸರ್ಕಾರ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸೈನಿಕ ಅಪ್ಪಚಂಗಡ ಮೋಟಯ್ಯ ಮಾತನಾಡಿ ಪ್ರಾಣದ ಹಂಗು ತೊರೆದು ಗಡಿಯಲ್ಲಿ ನಿಂತು ಸೇವೆ ಸಲ್ಲಿಸಿ ನಿವೃತ್ತರಾದ ನಾವು ಅಲ್ಪ ಪಿಂಚಣಿಯಲ್ಲಿ ಜೀವನ ಸಾಗಿಸಬೇಕಾಗಿದೆ. ನಿವೃತ್ತ ಸೈನಿಕರಿಗೆ ಪುನರ್ವಸತಿ ಕಲ್ಪಿಸುವುದು ಹಾಗೂ ನೆಮ್ಮದಿಯ ಜೀವನ ನಡೆಸಲು ಅನುಕೂಲ ಮಾಡಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಮೂಲಕ ಮಾಜಿ ಸೈನಿಕರನ್ನು ಗೌರವಿಸಬೇಕು ಎಂದರು.

ಸಭೆಯಲ್ಲಿ ಮಾಜಿ ಸೈನಿಕರ ಕಷ್ಟಗಳಿಗೆ ಸಂಘ ಸ್ಪಂದಿಸುವ ಬಗ್ಗೆ ಹಾಗೂ ಮಾಜಿ ಸೈನಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಬಗ್ಗೆ ಹಾಗೂ ಮಾಜಿ ಸೈನಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಮನ್ನೆರಾ ರಮೇಶ್, ಗೌರವ ಕಾರ್ಯದರ್ಶಿ ಉಳುವಂಗಡ ಎ. ಗಣಪತಿ, ಖಜಾಂಚಿ ಚಂಗುಲಂಡ ಎಂ. ಸತೀಶ್, ಸಂಘದ ಸದಸ್ಯರಾದ ಎಂ.ಎಸ್. ಕುಶಾಲಪ್ಪ, ಸಿ.ಎಂ. ಗೋಕುಲ, ಸಿ.ಸಿ. ಪುಣ್ಯವತಿ, ಕೆ.ಬಿ. ಪಾರ್ವತಿ, ಎಂ.ಬಿ. ಸುರೇಶ್, ಎಂ.ಎಂ. ಬೆಳ್ಳಿಯಪ್ಪ, ಐ.ಸಿ. ನಂಜಪ್ಪ ಇನ್ನಿತರರು ಇದ್ದರು.