ಸಿದ್ದಾಪುರ, ಜೂ.1: ಕೊಡಗಿನ ಅನಿವಾಸಿ ಜನರ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಕೆ.ಎಸ್.ಎಸ್.ಎಫ್.ನ ಜಿ.ಸಿ.ಸಿ. ಸಂಘಟನೆಯ ಕಾರ್ಯಕಾರಿ ಸಮಿತಿಯನ್ನು ಅಬ್ದುರಹಮಾನ್ ಉಸ್ತಾದ್ ಅವರ ಅನುಮೋದನೆ ಯೊಂದಿಗೆ ಅಸ್ಥಿತ್ವಕ್ಕೆ ತರಲಾಯಿತು. ಕಾರ್ಯಕ್ರಮದ ನೇತೃತ್ವವನ್ನು ಕೊಡಗು ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್.ನ ಅಧ್ಯಕ್ಷ ತಮ್ಲೀಕ್ ದಾರಿಮಿ ಹಾಗೂ ಪ್ರಧಾನ ಕಾರ್ಯದರ್ಶಿ ಸುಹೈಬ್ ಫೈಝಿ ಕೊಳಕೇರಿ, ಉಪಾಧ್ಯಕ್ಷರಾದ ಅನೀಫ್ ಫೈಝಿ ಗುಂಡಿಗೆರೆ ವಹಿಸಿದ್ದರು. ಎಸ್.ಕೆ.ಎಸ್.ಎಸ್.ಎಫ್. ರಾಜ್ಯ ಕಾರ್ಯದರ್ಶಿ ಆರೀಫ್ ಫೈಝಿ ಕೇಂದ್ರ ಸಮಿತಿ ಸದಸ್ಯ ಇಕ್ಬಾಲ್ ಮುಸ್ಲಿಯಾರ್, ಉಪಾಧ್ಯಕ್ಷ ಅಶ್ರಫ್ ಮಿಸ್ಬಾಹಿ, ಪಿ.ಎಂ. ಅಬ್ದುಲ್ಲ ಹಾಜರಿದ್ದರು. ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಯಿತು. ಸಲಹಾ ಸಮಿತಿ ಅಧ್ಯಕ್ಷರಾಗಿ ಹುಸೈನ್ ಪೈಜಿ ಬಜೆಗುಂಡಿ, ಉಪಾಧ್ಯಕ್ಷ ರಾಗಿ ಝಯಿನುದ್ದೀನ್ ಮುಸ್ಲಿಯಾರ್, ಚೋಕಂಡಳ್ಳಿ ರಹೀಂ ಮಲೇಶಿಯ, ಪ್ರಧಾನ ಕಾರ್ಯದರ್ಶಿ ಶಿಹಾಬ್ ಅಲುನ್ಗಲ್ ನೆಲ್ಯಹುದಿಕೇರಿ, ಕೋಶಾಧಿಕಾರಿ ರಜಾಕ್ ಫೈಜಿ ಎಡಪಾಲ, ವರ್ಕಿಂಗ್ ಸೆಕ್ರೆಟರಿ ಅಬ್ದುಲ್ ಸಮದ್ ಎಡಪ್ಪಾಲ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಗಫೂರ್ ವೀರಾಜಪೇಟೆ, ಜಂಟಿ ಕಾರ್ಯದರ್ಶಿಗಳಾಗಿ ಅಶ್ರಫ್ ಎಮ್ಮೆಮಾಡು, ನಿಜಾಮ್ ಯಡಪಾಲ, ರಫೀಕ್ ನೆಲ್ಯಹುದಿಕೇರಿ, ಮಾದ್ಯಮ ಸಲಹೆಗಾರರಾಗಿ ಶಫೀಕ್ ನೆಲ್ಯಹುದಿಕೇರಿ, ವಿಕಾಯ ಅಧ್ಯಕ್ಷ ಅಬೂ ಸಾಲಿಹ್ ಯಮಾನಿ, ಸಲಹಾ ಸಮಿತಿ ಪದಾಧಿಕಾರಿಗಳಾಗಿ ಅಬ್ಬಾಸ್ ಹಾಜಿ ಅಯ್ಯಂಗೇರಿ, ಸಿದ್ದೀಕ್ ಬಾಕವಿ 7ನೇ ಹೊಸಕೋಟೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಝಾಕ್ ಕಡಂಗ, ಫೈಝಲ್ ಮಲೇಶಿಯ, ಯಾಹ್ಯ ಕೊಡ್ಲಿಪೇಟೆ, ಹಮೀದ್ ಕೊಪ್ಪ, ಹಾಶಿಮ್ ಎಡಪಾಲ, ಝಕರಿಯ ಎಡಪಾಲ, ಲತೀಫ್ ಕಡಂಗ, ಶಿಹಾಬ್ ಎಡಪಾಲ, ಜಿಬಿ ಸೌದಿ, ಇರ್ಶಾದ್ ಕೂಡಿಗೆ, ಕಮರುದ್ದೀನ್ ವೀರಾಜಪೇಟೆ ಇವರುಗಳನ್ನು ಆಯ್ಕೆಗೊಳಿಸಲಾಯಿತು.