ಕೂಡಿಗೆ, ಜೂ. 1 : ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಸೋಮವಾರಪೇಟೆ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ವಿವಿಧ ಗ್ರಾಮ ಪಂಚಾಯತಿಗಳ ಸಹಯೋಗ ದೊಂದಿಗೆ ಕುಶಾಲನಗರ ಹೋಬಳಿ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯತಿಗಳಲ್ಲಿ ಜಾಗತಿಕ ಜೀವವೈವಿಧ್ಯ ದಿನಾಚರಣೆ ಮತ್ತು ಗಿಡ ವಿತರಣೆ ಕಾರ್ಯಕ್ರಮ ನಡೆಯಿತು. ಸೋಮವಾರಪೇಟೆ ತಾಲೂಕು ಅರಣ್ಯ ಅಧಿಕಾರಿ ನಮನ್ ನಾಯಕ್ ಮಾತನಾಡಿ ಪರಿಸರ ಸಂರಕ್ಷಣೆ ಮಾಡುವ ಮೂಲಕ ಆರೋಗ್ಯವನ್ನು ಸುಧಾರಿಸಲು ಸಾಧ್ಯ ಎಂದರು.

ಕೂಡಿಗೆ ಹೆಬ್ಬಾಲೆ ತೂರೆನೂರು ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಯಾ ಶಾಲೆಯ ಆವರಣ, ಗ್ರಾಮ ಪಂಚಾಯತಿ ಆವರಣ ಮತ್ತು ಆಸ್ಪತ್ರೆಯ ಖಾಲಿ ಇದ್ದ ಜಾಗದಲ್ಲಿ ಉತ್ತಮ ಹಣ್ಣಿನ ಗಿಡಗಳನ್ನು ನೆಡಲಾಯಿತು. ಅಲ್ಲದೆ ನೂರಾರು ರೈತರುಗಳಿಗೆ ಉಚಿತವಾಗಿ ಗಿಡಗಳನ್ನು ವಿತರಣೆ ಮಾಡಲಾಯಿತು. ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮಲೀಲಾ ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಲತಾ, ತೂರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷ ದೇವರಾಜು ಶಿರಂಗಾಲ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್.ಆರ್. ಮಂಜುನಾಥ, ಆಯಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಾಕೇಶ್, ಹರೀಶ್, ಶಿಲಾ,್ಪ ಸಂತೋಷ, ಸೇರಿದಂತೆ ಆಯಾ ಪಂಚಾಯತಿ ಸದಸ್ಯರು ಹಾಗೂ ಅರಣ್ಯ ಅಧಿಕಾರಿ ಎಸ್.ಕೆ. ಫಿರೋಜ್‍ಖಾನ್ ಹಾಜರಿದ್ದರು.