ಮಡಿಕೇರಿ,ಜೂ. 1: ಜಿಲ್ಲೆಯ ಗಡಿ ಗ್ರಾಮವಾದ ಕರಿಕೆಯಲ್ಲಿ ಗ್ರಾಮ ಪಂಚಾಯ್ತಿ ಆಡಳಿತದಿಂದಲೇ ಭಾರೀ ಮರಗಳÀ ಹನನ ನಡೆದಿದೆ. ಇತರರು ಮರ ಕಡಿದರೆ ಕ್ರÀಮಕ್ಕೆ ಮುಂದಾಗ ಬೇಕಾದ ಪಂಚಾಯ್ತಿ ಆಡಳಿತವೇ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆÀಯಲು ಪ್ರಯತ್ನಿಸಿ ಇದೀಗ ಅರಣ್ಯ ಇಲಾಖೆಯ ಅವಕೃಪೆಗೆ ಒಳಗಾಗಿದೆ. ಭಾಗಮಂಡಲ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಡಿದ ಮರಗಳನ್ನು ಇಲಾಖಾ ವಶಕ್ಕೆ ತೆಗೆದುಕೊಂಡಿದ್ದಾರೆ. ಸರಕಾರಿ ಜಾಗದಲ್ಲಿ ಕಸ ವಿಲೇವಾರಿಗೊಳಿಸಲು ಜಾಗ ನಿರ್ಮಾಣ ಮಾಡುವ ನೆಪದಲ್ಲಿ ಅನೇಕ ಮರಗಳನ್ನು ನೆಲಸಮ ಗೊಳಿಸಲಾಗಿದೆ. ಅಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೆತ್ತುಕಾಯ ಪಚ್ಚೆಪಿಲಾವು ಎಂಬಲ್ಲಿ ಪಟ್ಟಿ ಘಾಟ್ ಮೀಸಲು ಅರಣ್ಯಕ್ಕೆ ಹೊಂದಿ ಕೊಂಡಂತಿರುವ ಸರಕಾರಿ ಜಮೀನನ್ನು 2015 ರಲ್ಲಿ ಸರ್ವೆ ನಂ.425/1ಪಿ2 ರಲ್ಲಿ ಗ್ರಾಮ ಪಂಚಾಯತಿ ಕಸ ವಿಲೇವಾರಿ ಘಟಕ ಹಾಗೂ ಸ್ಮಶಾನಕ್ಕೆ ಜಾಗ ಗುರುತುಮಾಡಿ ತನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿತ್ತು. ಅದರಂತೆ ಖಾತೆ ವರ್ಗಾವಣೆ ಕೂಡ ಆಗಿದೆ., ಆದರೆ ಇದೀಗ ಪಂಚಾಯತಿ ಅಧಿಕಾರ ಅವಧಿ ಮುಕ್ತಾಯದ ಕೊನೆಯ ಹಂತದಲ್ಲಿ ಆಡಳಿತ ಮಂಡಳಿಯು ದಿಢೀರನೆ ಈ ಜಾಗದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಕಸ ವಿಲೇವಾರಿ, (ಮೊದಲ ಪುಟದಿಂದ) ಸ್ಮಶಾನ ಅಭಿವೃದ್ಧಿ ಕಾಮಗಾರಿ ಗೈಗೊಂಡಿದ್ದು ಅರಣ್ಯ ಇಲಾಖೆಯ ಗಮನಕ್ಕೆ ಬಾರದೇ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಮರ ಕÀಡಿಯಲಾಗಿದೆ. ಮೀಸಲು ಅರಣ್ಯದ ತಪ್ಪಲಿನ ಸರಕಾರಿ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಹುಲುವೆ ಮತ್ತಿ, ಬಾಗೆ, ಹಾಗೂ ಜಂಬೇ ಮತ್ತು ಇತರ ವಿವಿಧ ಜಾತಿಯ ಹಲವಾರು ಮರಗಳನ್ನು ಕಡಿದು ನೆಲಸಮ ಗೊಳಿಸಿದ್ದ ಚಿತ್ರಣ 'ಶಕ್ತಿ' ಗೆ ಲಭಿಸಿತು. ಒಂದು ವೇಳೆ ಅನುಮತಿ ನೀಡಿದ್ದರೆ ಅರಣ್ಯ ಇಲಾಖೆಯು ಮರಗಳ ಎಣಿಕೆ ಮಾಡಿ ಗುರುತುಮಾಡಿ ಅಧಿಕೃತ ಪಟ್ಟಿ ತಯಾರಿಸಿ ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳಿಂದ ಅಧಿಕೃತ ಅನುಮತಿ ಪಡೆಯಬೇಕಿತ್ತು. ಇಲಾಖೆಯೇ ಕುಶಾಲನಗರ ನಾಟ ಸಂಗ್ರಹಾಲಯಕ್ಕೆ ಸಾಗಾಟ ಮಾಡಬೇಕಿತ್ತು. .ಆದರೆ ಇಲ್ಲಿ ಕದ್ದುಮುಚ್ಚಿ ಮರಕಡಿಯಲು ಕಾರಣವೇನು? ಮಳೆಯಾದ ಕಾರಣ ಮಣ್ಣಿನ ಸಂರಕ್ಷಣೆ ದೃಷ್ಟಿಯಿಂದ ಅರಣ್ಯ ಇಲಾಖೆಯು ಜೂನ್ 1 ರಿಂದ ಅಕ್ಟೋಬರ್ 30 ರ ತನಕ ಮರ ಕಡಿಯಲು ಯಾವುದೇ ಅನುಮತಿ ಇರುವುದಿಲ್ಲ. ಇಷ್ಟೆಲ್ಲ ಕಾನೂನು ಗಳಿದ್ದರೂ ಎಲ್ಲಾ ಕಾನೂನನ್ನು ಗಾಳಿಗೆ ತೂರಿ ಅರಣ್ಯ ಇಲಾಖೆಯಿಂದ ಅಧಿಕೃತ ಅನುಮತಿ ಪಡೆಯದೆ ಇವರಿಗೆ ಅನುಮತಿ ನೀಡಿದವರಾರು ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಈ ಹಿನ್ನೆಲೆಯಲ್ಲಿ ಇಂದು ಮಡಿಕೇರಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರನ್ನು “ಶಕ್ತಿ” ಪ್ರಶ್ನಿಸಿದಾಗ ವಿಷಯವರಿತ ಅವರು ಭಾಗಮಂಡಲ ಅರಣ್ಯ ವಲಯಾಧಿ ಕಾರಿ ದೇವರಾಜ್ ಅವರು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು. ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದೆ.

ಸುಮಾರು 2.5 ಎಕರೆ ಜಾಗದಲ್ಲಿ ಕಾಡು ಕಡಿಯಲಾಗಿದ್ದು ಈ ಹಿಂದೆ ಇದೇ ಜಾಗದಲ್ಲಿ ಬೀಟೆ ಮರಕಡಿದು ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಗಿತ್ತು., ರಬ್ಬರ್ ಮರ ಕಡಿದು ಆ ಮರಗಳ ಸಾಗಾಟ ನೆಪದಲ್ಲಿ ಅಕ್ರಮ ಬೀಟೆ ಮರವನ್ನು ಕೇರಳಕ್ಕೆ ಸಾಗಾಟ ಎಂಬ ತನಿಖಾ ವರದಿ ಈ ಹಿಂದೆ 'ಶಕ್ತಿ' ಯಲ್ಲಿ ಪ್ರಕಟಗೊಂಡ ಬಳಿಕ ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಕೇರಳದಿಂದ ಮರಳಿ ಮರಗಳನ್ನು ವಶಕ್ಕೆ ಪಡೆದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.