ವೀರಾಜಪೇಟೆ, ಮೇ 27: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ಪಣಿ ಎರವರ ಮನು ಎಂಬವರ ಒಂದು ವರ್ಷದ ರಿಶಿ ಎಂಬ ಮಗು ನಿನ್ನೆ ದಿನ ಸಂಜೆ ಆಕಸ್ಮಿಕವಾಗಿ ಮನೆಯ ಸಮೀಪದ ನೆಲದ ಬಾವಿಗೆ ಬಿದ್ದು ಸಾವನ್ನಪ್ಪಿರು ವುದಾಗಿ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್ಜಿ ಗ್ರಾಮದ ಕೆ.ಅರುಣ ಎಂಬವರ ಕಾಫಿ ತೋಟದ ಲೈನು ಮನೆಯಲ್ಲಿರುವ ಮನು,ಮುತ್ತಮ್ಮ ದಂಪತಿಯ ಮಗು ಸಂಜೆ 5-30ರ ಸಮಯದಲ್ಲಿ ಮನೆಯ ಮುಂದಿನ ಆವರಣದಲ್ಲಿ ಆಟವಾಡುತ್ತಿದ್ದಾಗ ನೆಲದ ಸಮದಲ್ಲಿ ಇದ್ದ ಬಾವಿಗೆ ಬಿದ್ದಿದೆ. ಸಂಜೆ ಸುಮಾರು 6-30ರ ಸಮಯದಲ್ಲಿ ನಾಪತ್ತೆಯಾಗಿದ್ದ ಮಗುವನ್ನು ಹುಡುಕಾಡಿದ ಬಳಿಕ ಮಗು ಬಾವಿಗೆ ಬಿದ್ದಿರಬಹುದೆಂದು ಶಂಕಿಸಿ ಬಾವಿಯನ್ನು ಶೋಧಿಸಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿನ ಮೃತದೇಹವನ್ನು ಇಂದು ವೈದ್ಯಕೀಯ ಪರೀಕ್ಷೆಗೆ ಗುರಿ ಪಡಿಸಿ ವಾರೀಸುದಾರರಿಗೆ ಒಪ್ಪಿಸಲಾಯಿತು.