ನಾಪೋಕ್ಲು, ಮೇ 27: ಕಿರುಂದಾಡು ಗ್ರಾಮದಲ್ಲಿ ಪಿರಿಯಾಪಟ್ಟಣದ ಪುಷ್ಪ ಎಂಬವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಿದ್ದು ಎಂಬಾತನನ್ನು ಪಾರಾಣೆ ಬಸ್ಸು ನಿಲ್ದಾಣದಲ್ಲಿ ನಾಪೆÇೀಕ್ಲು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಮತ್ತು ಪುಷ್ಪ ಕಿರುಂದಾಡು ಗ್ರಾಮದ ಅಪ್ಪನೆರವಂಡ ರಾಧಾಕೃಷ್ಣ ಎಂಬವರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ತಾ. 26 ರಂದು ಇಬ್ಬರ ನಡುವೆ ಕಲಹ ನಡೆದು ಸಿದ್ದು ಪುಷ್ಪಳನ್ನು ದೊಣ್ಣೆಯಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ಆದೇಶದಂತೆ ಡಿವೈಎಸ್ಪಿ, ದಿನೇಶ್ ಅವರ ಮಾರ್ಗದರ್ಶನ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್ ನೇತೃತ್ವದಲ್ಲಿ ನಾಪೆÇೀಕ್ಲು ಠಾಣಾಧಿಕಾರಿ ಆರ್. ಕಿರಣ್ ಮತ್ತು ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಇದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇಂದು ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ನಾಪೋಕ್ಲು ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.