ಮಡಿಕೇರಿ, ಮೇ 27: ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದರ ಪ್ರಯುಕ್ತ 6 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.
ವಿಷಯಗಳು: ಜೀವವೈವಿಧ್ಯತೆಯ ರಕ್ಷಣೆಯಿಂದ ಮಾನವನ ಪ್ರಗತಿ. ಕೊರೊನಾ ವೈರಸ್ ಪಿಡುಗು-ನಿಸರ್ಗ ಹಾಗೂ ಜೀವವೈವಿಧ್ಯತೆಗೆ ವರದಾನ. ಪರಿಸರ ಸಮತೋಲನೆಯಲ್ಲಿ ಜೀವವೈವಿಧ್ಯದ ಪಾತ್ರ.
ನಿಬಂಧನೆಗಳು: ಚಿತ್ರ ಬರೆಯಲು ಎ3 ಹಾಳೆ ಬಳಸುವುದು. ಕ್ರೆಯಾನ್ಸ್, ಬಣ್ಣದ ಪೆನ್ಸಿಲ್, ಬ್ರಷ್ ಈ ಯಾವುದಾದರೂ ಸಾಮಗ್ರಿಗಳನ್ನು ಬಳಸಿ ಚಿತ್ರವನ್ನು ರಚಿಸಬಹುದು. ವಿದ್ಯಾರ್ಥಿಗಳು ತಮ್ಮ ಹೆಸರು, ವಿಳಾಸ ಹಾಗೂ ಮೊಬೈಲ್-ದೂರವಾಣಿ, ಇ-ಮೇಲ್ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವುದು. ಪ್ರತಿ ವಿಷಯದ ಅತ್ಯುತ್ತಮ ಐದು ಚಿತ್ರಗಳಿಗೆ (6-8, 9-12ನೇ ವರ್ಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕ) ನಗದು ಹಾಗೂ ಬಹುಮಾನಗಳನ್ನು ನೀಡಲಾಗುತ್ತದೆ. ಒಬ್ಬರು ಒಂದು ವಿಷಯಕ್ಕೆ ಒಂದು ಚಿತ್ರವನ್ನು ಮಾತ್ರ ಬರೆಯತಕ್ಕದ್ದು. ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಗುವುದು. ಚಿತ್ರಗಳನ್ನು ಕರಾವಿಪ ಕಚೇರಿಗೆ ಕಳುಹಿಸಲು ಕೊನೆಯ ದಿನಾಂಕ ತಾ. 31. ಚಿತ್ರಗಳನ್ನು ಕಳಿಸಬೇಕಾದ ಇ-ಮೇಲ್: ಞಡಿvಠಿ.iಟಿಜಿo@gmಚಿiಟ.ಛಿom ಅಥವಾ ವಾಟ್ಸ್ಅಪ್ ಸಂಖ್ಯೆ: 9483549159. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9483549159, 9008442557, 9880917831.