ಸುಂಟಿಕೊಪ್ಪ: ಇಲ್ಲಿನ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾದಿಯರಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಆಶಾ ಕಾರ್ಯಕರ್ತೆಯರಿಗೆ ಗ್ರಾಮ ಪಂಚಾಯಿತಿ ವತಿಯಿಂದ ನಿತ್ಯೋಪಯೋಗಿ ವಸ್ತುಗಳ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ರಂಜಿನಿ, ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನಾರ್, ಸದಸ್ಯರಾದ ಅಂಕೆಕಲ್ ಚಂದ್ರಶೇಖರ್, ವಸಂತ, ಸತೀಶ, ಬಿಜು, ರಾಣಿ, ಚೆನ್ನಮ್ಮ, ಯಶೋಧ ಪಂಚಾಯಿತಿ ಸಿಬ್ಬಂದಿ ವರ್ಗ ಹಾಜರಿದ್ದರು.ಚೆಟ್ಟಳ್ಳಿ: ಎಸ್‍ಕೆಎಸ್‍ಎಸ್‍ಎಫ್ ಹಾಗೂ ಎಸ್‍ವೈಎಸ್ ಯಡಪಾಲ ಇವರ ವತಿಯಿಂದ ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಊರಿನ 145 ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಹೊತ್ತ ಕಿಟ್‍ಗಳನ್ನು ಮನೆ ಮನೆಗಳಿಗೆ ತೆರಳಿ ವಿತರಿಸಲಾಯಿತು, ಮೊಯ್ದು ಫೈಝಿ ಕೆ.ಎಂ. ಅವರ ಪ್ರಾರ್ಥನೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಎಸ್‍ವೈಎಸ್ ಕಾರ್ಯದರ್ಶಿ ಅಬೂಬಕ್ಕರ್ ಮೌಲವಿ, ಉಪಾಧ್ಯಕ್ಷ ಕೆ.ಯು. ಈಸ, ಕೋಶಾಧಿಕಾರಿ ಕೆ.ಎಂ. ಹಮೀದ್, ಎಸ್.ಕೆ. ಎಸ್.ಎಸ್.ಎಫ್. ಇದರ ಅಧ್ಯಕ್ಷರಾದ ಶಈದ್ ಫೈಜಿ, ಕಾರ್ಯದರ್ಶಿ ಹನೀಫ ಫೈಜಿ, ಕೋಶಾಧಿಕಾರಿ ರಫೀಕ್ ಕೆ.ಪಿ., ಹಾರಿಸ್ ಬಾಖವಿ, ಸಿನಾನ್ ಎಸ್.ಎಸ್., ಹನೀಫಾ ಇನ್ನಿತರರು ಹಾಜರಿದ್ದರು.