ನಾಪೆÇೀಕ್ಲು, ಮೇ 27: ರಾಜ್ಯದ ಇತರ ಕಸುಬುದಾರರಿಗೆ ರಾಜ್ಯ ಸರಕಾರ ಸಹಾಯಧನ ನೀಡಿದಂತೆ ನಮಗೂ ನೀಡಬೇಕೆಂದು ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್‍ನ ನಾಪೆÇೀಕ್ಲು ವಲಯ ಘಟಕದಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ ನಾಪೆÇೀಕ್ಲು ವಲಯ ಅಧ್ಯಕ್ಷ ಎ.ಕೆ. ಚಂದ್ರನ್, ಕಾರ್ಯದರ್ಶಿ ಟಿ.ವಿ. ಸುಶೀಲ, ಸಮಿತಿ ಸದಸ್ಯ ಎನ್.ಇ. ಪುರುಷೋತ್ತಮ, ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮ ಅಸೋಸಿಯೇಷನ್‍ನ ಸದಸ್ಯರು ಕೂಡ ಎರಡು ತಿಂಗಳು ಕೆಲಸ ನಿರ್ವಹಿಸಿಲ್ಲ. ಆದ್ದರಿಂದ ನಮಗೂ ಕೂಡ ಸರಕಾರ ಸಹಾಯಧನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.