ಸುಂಟಿಕೊಪ್ಪ ಮೇ 27: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ನೆಲೆಸಿದ್ದ ಹೊರ ರಾಜ್ಯದ ಕಾರ್ಮಿಕರನ್ನು ಬಸ್ ಮೂಲಕ ಅವರುಗಳ ಊರಿಗೆ ಇತ್ತೀಚೆಗೆ ಕಳುಹಿಸಿಕೊಡಲಾಯಿತು. ಕೆದಕಲ್ ಗ್ರಾಮ ಪಂಚಾಯಿತಿಯ ವಿಠಲ ತೋಟ, ಕಾವೇರಿ ತೋಟ, ಮೋದೂರು ತೋಟ, ಗ್ರೀನ್ ಲ್ಯಾಂಡ್ ತೋಟದಲ್ಲಿ ಕಳೆದ 4 ತಿಂಗಳಿಂದÀ ತಮಿಳುನಾಡು ರಾಜ್ಯದ ಸೇಲಂ, ನೆಲ್ಲಿಪುರಂ, ತಿರುಣಾ ಮಲೈನ 141 ಕಾರ್ಮಿಕರು ಲಾಕ್‍ಡೌನ್‍ನಿಂದ ಸಿಲುಕಿಕೊಂಡಿದ್ದು, ಇದೀಗ ಸಡಿಲಿಕೆ ಮಾಡಿದ್ದರಿಂದ ಗ್ರಾಮ ಪಂಚಾಯಿತಿ ವತಿಯಿಂದ 6 ಬಸ್‍ಗಳಲ್ಲಿ ಕಳುಹಿಸಿಕೊಡಲಾಯಿತು. ಈ ಸಂದರ್ಭ ಪಂಚಾಯಿತಿ ಅಧ್ಯಕ್ಷ ಬಿ.ಎ. ಬಾಲಕೃಷ್ಣ ರೈ. ಸದಸ್ಯ ದೇವಿಪ್ರಸಾದ್ ಇತರರು ಹಾಜರಿದ್ದರು.