ಶ್ರೀಮಂಗಲ, ಮೇ 26 : ಬ್ರಹ್ಮಾಂಡ ಗುರೂಜಿ ಎಂಬವರು ಕೊಡಗು ಜಿಲ್ಲೆ ಮುಂದಿನ ದಿನಗಳಲ್ಲಿ ಬಾರಿ ಭೂಕಂಪದಿಂದ ನೆಲಸಮವಾಗ ಲಿದೆ ಎಂದು ಭವಿಷ್ಯ ನುಡಿದಿರುವುದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದು, ಈ ಬಗ್ಗೆ ಕೊಡಗಿನ ಜನತೆಯಲ್ಲಿ ತೀವ್ರ ಭಯ ಮೂಡಿಸಿದೆ. ಆದ್ದರಿಂದ ಸಮಾಜದಲ್ಲಿ ಆತಂಕ ಸೃಷ್ಟಿಸಿರುವ ಹೇಳಿಕೆ ನೀಡಿರುವ ಈ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೊಡಗು ಬೆಳೆಗಾರರ ಒಕ್ಕೂಟ ಶ್ರೀಮಂಗಲ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಗುರೂಜಿ ಎಂದು ಹೇಳಿಕೊಂಡಿ ರುವ ಈ ವ್ಯಕ್ತಿ ಕೊಡಗಿನ ಭವಿಷ್ಯ ನುಡಿದಿರುವುದು ತಾ. 25 ರಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರುತ್ತದೆ. ಇವರು ಹೇಳಿರುವ ಭವಿಷ್ಯ ಯಾವ ಆಧಾರದಲ್ಲಿದೆ.? ಎಂದು ಪ್ರಶ್ನಿಸಿದ್ದಾರೆ.

ಒಂದು ವೇಳೆ ಸರಕಾರ ಇದನ್ನು ಅಧಿಕೃತವಾಗಿ ನಂಬುವುದಾದರೇ, ಆತಂಕದಲ್ಲಿರುವ ಜನರಿಗೆ ಸುರಕ್ಷಿತ ಜಾಗಗಳಿಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಈಗಾಗಲೇ ಸತತ 2 ವರ್ಷಗಳಿಂದ ಪ್ರಾಕೃತಿಕ ವಿಕೋಪ ದಿಂದ ನಲುಗಿರುವ ಕೊಡಗಿನ ಜನತೆ ಈ ಭವಿಷ್ಯದಿಂದ ಮತ್ತಷ್ಟು ಆತಂಕ ಗೊಂಡಿದ್ದಾರೆ. ಈತ ಹೇಳಿರುವುದು ಸುಳ್ಳು ಎಂದಾದರೇ, ಮೂಡನಂಬಿಕೆ ಎಂದಾದರೇ ಸಮಾಜದಲ್ಲಿ ಆತಂಕ ಸೃಷ್ಟಿಸಲು ಕಾರಣವಾಗಿರುವ ಈ ಸ್ವಯಂಘೋಷಿತ ಬ್ರಹ್ಮಾಂಡ ಗುರೂಜಿ ವಿರುದ್ಧ ಕಾನೂನು ಕ್ರಮಕೈಗೊಳ್ಳ ಬೇಕು ಎಂದು ಸಂಸ್ಥೆ ಆಗ್ರಹಿಸಿದೆ. ದೂರು ದಾಖಲಿಸಿರುವ ಕೊಡಗು ಬೆಳೆಗಾರರ ಒಕ್ಕೂಟ ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಹಾಗೂ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅವರೊಂದಿಗೆ ಸಮಾ ಲೋಚನೆ ನಡೆಸಿತು. ಶ್ರೀಮಂಗಲ ಪೆÇಲೀಸ್ ಠಾಣೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯ ದರ್ಶಿ ಬಾಚಂಗಡ ದಾದ ದೇವಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ ದೂರು ಸಲ್ಲಿಸಿದರು.