ಸೋಮವಾರಪೇಟೆ, ಮೇ 25: ಸಂಪೂರ್ಣ ಲಾಕ್‍ಡೌನ್-ಕಫ್ರ್ಯೂ ಸಂದರ್ಭದಲ್ಲಿ ಪುಂಡರಿಂದ ಪಟ್ಟಣದಲ್ಲಿ ದುಷ್ಕøತ್ಯ ನಡೆದಿದ್ದು, ಮನೆಯ ಮುಂಭಾಗ ನಿಲ್ಲಿಸಿದ್ದ ವಾಹನಗಳು ಹಾಗೂ ಮನೆಯೊಂದರ ಕಿಟಕಿಗೆ ಕಲ್ಲುತೂರಿ ವಿಕೃತಿ ಮೆರೆದಿದ್ದಾರೆ.ನಿನ್ನೆ ನಡುರಾತ್ರಿ 12 ರಿಂದ 1 ಗಂಟೆಯವರೆಗೆ ಪಟ್ಟಣದ ಮಹದೇಶ್ವರ ಬಡಾವಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಕಾರುಗಳು, ಅಬಕಾರಿ ಇಲಾಖೆಯ ವಾಹನ ಸೇರಿದಂತೆ ವಾಸದ ಮನೆಯೊಂದರ ಕಿಟಕಿಗೆ ಅಳವಡಿಸಿದ್ದ ಗಾಜುಗಳನ್ನು ಕಲ್ಲಿನಿಂದ ಹೊಡೆದು ಪುಡಿಗಟ್ಟಿದ್ದಾರೆ.ನಿನ್ನೆ ದಿನ ಬೆಳಗ್ಗಿನಿಂದ ಲಾಕ್‍ಡೌನ್ ಇದ್ದು, ಸಂಜೆ 7 ರಿಂದ ಇಂದು ಬೆಳಗ್ಗಿನ 7 ಗಂಟೆಯವರೆಗೂ ಕಫ್ರ್ಯೂ ಇದ್ದರೂ ಸಹ ಪಟ್ಟಣದಲ್ಲಿ ಸಂಚರಿಸಿ ಕಾನೂನು ನಿಯಮ ಮೀರಿರುವ ಪುಂಡರು, ತಮ್ಮ ಮನೋವಿಕೃತಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇರೆ ತೋರಿದ್ದಾರೆ.ಮಹದೇಶ್ವರ ಬಡಾವಣೆಯ ಲ್ಲಿರುವ ಪ.ಪಂ. ಮಾಜೀ ಅಧ್ಯಕ್ಷೆ ಲೀಲಾ ನಿರ್ವಾಣಿ ಅವರ ಮನೆ ಬಳಿ ನಿಲ್ಲಿಸಿದ್ದ ಮಾರುತಿ ಆಲ್ಟೋ ಕಾರಿಗೆ ಕಲ್ಲು ಹೊಡೆಯುವ ಮೂಲಕ ಪ್ರಾರಂಭವಾದ ಪುಂಡರ ವಿಕೃತಿ ನಂತರ 4 ಕಾರುಗಳು ಹಾಗೂ ಒಂದು ವಾಸದ ಮನೆಯ ಮೇಲೂ ಮುಂದುವರೆದಿದೆ.

ಪುಂಡರ ಪುಂಡಾಟಿಕೆಯಿಂದ ಮಾರುತಿ 800 ಕಾರಿನ ಮುಂಭಾಗದ ಗಾಜು ಪುಡಿಯಾಗಿದೆ. ನಂತರ ಚಂದ್ರಕಾಂತ ಅವರ ಮನೆಯ ಹತ್ತಿರ ಸಾರ್ವಜನಿಕ ರಸ್ತೆಗೆ ನಿರ್ಮಿಸಿರುವ ಮೆಟ್ಟಿಲುಗಳನ್ನು ಇಳಿದು ಮುಂದಕ್ಕೆ ತೆರಳಿರುವ ಪುಂಡರು, ಮಹದೇಶ್ವರ ಬಡಾವಣೆಯ ಪುಷ್ಪ ಅವರ ಮನೆಯ ಗಾಜಿಗೆ ಎರಡು ಕಲ್ಲು ಹೊಡೆದಿದ್ದಾರೆ. ಇದರಲ್ಲಿ ಒಂದು ಕಲ್ಲು ಮನೆಯ ಒಳಗೆ ಬಿದ್ದಿದ್ದರೆ, ಮತ್ತೊಂದು ಕಲ್ಲು ಹೊರಭಾಗ ಬಿದ್ದಿದೆ.

ಮನೆಯೊಳಗೆ ಕಲ್ಲು ಬಿದ್ದಿದ್ದರಿಂದ ಎಚ್ಚರಗೊಂಡ ಮನೆಯವರು ಭಯದಿಂದ ಹೊರಬರದೇ ಮನೆಯೊಳಗೆ ಕುಳಿತಿದ್ದಾರೆ. ಇದಾದ ನಂತರ ಮುಂದಕ್ಕೆ ಚಲಿಸಿರುವ ದುಷ್ಕರ್ಮಿಗಳು, ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಧರ್ಮಪ್ಪ ಅವರಿಗೆ ಸೇರಿದ ಇಆನ್ ಕಾರಿನ ಹಿಂಭಾಗದ ಲೈಟ್‍ಗೆ ಕಲ್ಲು ಹೊಡೆದಿದ್ದಾರೆ.

ನಂತರ ಡಿಸಿಸಿ ಬ್ಯಾಂಕ್ ಪಕ್ಕದಲ್ಲಿ ನಿಲ್ಲಿಸಿದ್ದ ಟೈಲ್ಸ್ ನಿಂಗರಾಜು ಅವರಿಗೆ ಸೇರಿದ ಮಾರುತಿ 800 ಕಾರಿಗೆ ಕಲ್ಲು ಹೊಡೆದಿದ್ದು, ಕಾರಿನ ಮುಂಭಾಗದ ಗಾಜುಗಳು ಪುಡಿಯಾಗಿವೆ. ಇಲ್ಲಿಂದ ಮುಂದಕ್ಕೆ ತೆರಳಿ ಅಬಕಾರಿ ಇಲಾಖೆ ಮುಂಭಾಗ ನಿಲ್ಲಿಸಿದ್ದ ಇಲಾಖೆಗೆ ಸೇರಿದ ಬೊಲೆರೋ ವಾಹನದ ಮುಂಭಾಗದ ಗಾಜನ್ನು ಪುಡಿಗಟ್ಟಿದ್ದಾರೆ. ನಂತರ ಬಲರಾಂ ಅವರ ಮನೆಯ ಮುಂಭಾಗದ ನಿಲ್ಲಿಸಿದ್ದ ಮಾರುತಿ 800 ಕಾರಿನ ಮೇಲೂ ವಿಕೃತಿ ತೋರಿದ್ದು, ಕಾರಿನ ಮುಂಭಾಗದ ಗಾಜನ್ನು ಕಲ್ಲಿನಿಂದ ಹೊಡೆದು ಜಖಂಗೊಳಿಸಿದ್ದಾರೆ.

ಇಂದು ಬೆಳಿಗ್ಗೆ ದುಷ್ಕøತ್ಯ ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕರು ಭಯ ಭೀತರಾಗಿದ್ದಾರೆ. ರಾತ್ರಿ ವೇಳೆಯಲ್ಲಿ ನಡೆದಿರುವ ಪುಂಡಾಟಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಸ್ಥಳೀಯ ನಿವಾಸಿಗಳು, ರಾತ್ರಿ ವೇಳೆ ಪೊಲೀಸ್ ಬೀಟ್ ಹೆಚ್ಚಿಸಬೇಕೆಂದು ಇಲಾಖೆಯನ್ನು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, (ಮೊದಲ ಪುಟದಿಂದ) ಪುಂಡರ ಪತ್ತೆಗೆ ಬಲೆ ಬೀಸಿದ್ದಾರೆ. ಈ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲು ಪೊಲೀಸರು ಮುಂದಾಗಿದ್ದು, ಶೀಘ್ರದಲ್ಲೇ ಪುಂಡಾಟ ನಡೆಸಿರುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗುವದು ಎಂದು ಭರವಸೆ ನೀಡಿದ್ದಾರೆ.

ಮಹದೇಶ್ವರ ಬಡಾವಣೆಯ ಧರ್ಮಪ್ಪ ಮತ್ತು ನಿಂಗರಾಜು ಅವರುಗಳು ತಮ್ಮ ಕಾರಿಗೆ ಕಲ್ಲು ಹೊಡೆದ ದುಷ್ಕರ್ಮಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.