ನಾಪೋಕ್ಲು, ಮೇ 26: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಚಿನ್ನಾಭರಣ ಕಳವು ಮಾಡಿದ ಪ್ರಕರಣ ಕಕ್ಕಬ್ಬೆ ಸಮೀಪದ ಯವಕಪಾಡಿ ಗ್ರಾಮದಲ್ಲಿ ಜರುಗಿದೆ. ಯವಕಪಾಡಿ ಗ್ರಾಮದ ಕರ್ತಂಡ ಮಾಚವ್ವ (ಮೀನಾ ತಮ್ಮ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಸಂಬಂಧಿಕರ ಮನೆಗೆ ತೆರಳಿದ್ದರು. ಇಂದು ಮನೆಗೆ ಹಿಂತಿರುಗಿದಾಗ ಮನೆಯ ಬÁಗಿಲಿನ ಬೀಗ ಮುರಿದಿದ್ದು ಗೋಚರಿಸಿದೆ. ಮನೆಯ ಒಳಗಿನ ಬೀರುವಿನಿಂದ 33 ಗ್ರಾಂ ಚಿನ್ನ, ರೂ. 3 ಸಾವಿರ ನಗದು ಸೇರಿದಂತೆ 90 ಸಾವಿರ ಮೌಲ್ಯದ ಆಭರಣ ಕಳವು ಆಗಿರುವುದು ಗೋಚರಿಸಿದೆ. ಈ ಬಗ್ಗೆ ನಾಪೋಕ್ಲು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆರಳಚ್ಚು ತಜ್ಞರು ಶ್ವಾನದಳದೊಂದಿಗೆ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಡಿವೈಎಸ್ಪಿ ಬಿ.ಪಿ. ದಿನೇಶ್, ವೃತ್ತ ನಿರೀಕ್ಷಕ ದಿವಾಕರ್, ಠಾಣಾಧಿಕಾರಿ ಆರ್.ಕಿರಣ್ ಹಾಗೂ ಸಿಬ್ಬಂದಿಗಳು ಹಾಜದ್ದರು.