ಮಡಿಕೇರಿ, ಮೇ 25: ಪೆರಾಜೆಯ ಆರ್.ಎ. ಶರತ್ ಎಂಬವರ ರಬ್ಬರ್ ತೋಟದಲ್ಲಿ ನಡೆದ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಶರತ್ ಅವರು ತಮ್ಮ ತೋಟದ ಲೈನ್‍ಮನೆಯ ಎದುರು ಶೇಖರಿಸಿಟ್ಟಿದ್ದ ಸುಮಾರು 2 ಲಕ್ಷದ 10 ಸಾವಿರ ರೂ. ಬೆಲೆ ಬಾಳುವ ರಬ್ಬರ್ ಶೀಟ್ ಹಾಗೂ ರಬ್ಬರ್ ಸ್ಕ್ರಾಪ್‍ಗಳನ್ನು ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಿರಿಯಾಕ್ ಕುರಿಯನ್, ಅರುಣ್‍ಕುಮಾರ್ ಹಾಗೂ ರಜನೀಶ್, ಬಿನಯ್ ಎಂಬವರು ಕಳವು ಮಾಡಿದ್ದು, ಈ ಬಗ್ಗೆ ಶರತ್ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಅರುಣ್‍ಕುಮಾರ್, ಸಿರಿಯಾಕ್ ಕುರಿಯನ್, ರಜನೀಶ್ ಇವರುಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಪಿಕ್‍ಅಪ್ ಹಾಗೂ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಮತ್ತೋರ್ವ ಆರೋಪಿ ಬಿನಯ್ ತಲೆಮರೆಸಿಕೊಂಡಿದ್ದಾನೆ.(ಮೊದಲ ಪುಟದಿಂದ) ಎಸ್‍ಪಿ. ಡಾ. ಸುಮನ್ ಡಿ.ಪಿ. ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್‍ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕ ಸಿ.ಎನ್. ದಿವಾಕರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್, ಸಿಬ್ಬಂದಿ ಗಳಾದ ತೀರ್ಥಕುಮಾರ್, ಪ್ರೇಮ್ ಕುಮಾರ್, ಶಿವರಾಜೇಗೌಡ, ಕಲ್ಲಪ್ಪ ಹಿಟ್ನಾಳ್, ಸೋಮಶೇಖರ್, ಅನಿಲ್ ಮತ್ತು ಚಾಲಕರಾದ ಪ್ರವೀಣ್‍ಕುಮಾರ್, ನಾಗರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.