ಮಡಿಕೇರಿ, ಮೇ 24: ಕೋವಿಡ್-19 ರ ಲಾಕ್ ಡೌನ್ ಸಂಬಂಧ ಸಂಕಷ್ಟಕ್ಕೊಳಗಾದ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಕರ್ನಾಟಕ ರಾಜ್ಯ ಸರ್ಕಾರವು ರೂ. 5000 ಪರಿಹಾರ ಧನವನ್ನು ಘೋಷಿಸಿದ್ದು, ಪರಿಹಾರವನ್ನು ಪಡೆಯಲು ಅರ್ಹ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಸೇವಾ ಸಿಂಧು ಪೋರ್ಟಲ್ hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸುವಾಗ ಈ ಕೆಳಕಂಡ ಮಾಹಿತಿಗಳು/ ದಾಖಲೆಗಳು ಅಗತ್ಯವಿರುತ್ತದೆ.

ವಾಹನ ಚಾಲನೆ ಪರವಾನಗಿ, ಸುಸ್ಥಿತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ನೋಂದಣಿ ಪತ್ರ, ಇನ್ಸೂರೆನ್ಸ್, ರಹದಾರಿ ಪರವಾನಗಿ, ಮೊಬೈಲ್ ನಂಬರ್ ದಾಖಲೆಗಳನ್ನು ನೀಡಬೇಕು.

ಅರ್ಜಿ ಸಲ್ಲಿಸಲಾದ ಅರ್ಹರಿಗೆ ರೂ.5000 ಪರಿಹಾರ ಧನವನ್ನು ಆಧಾರ್ ಸಂಖ್ಯೆ ಲಿಂಕ್ ಆದ ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರದ ವತಿಯಿಂದ ಜಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.