ಮಡಿಕೇರಿ, ಮೇ 22: ಕೊಡಗು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಆರೋಗ್ಯ ಕಾರ್ಯಕರ್ತರ ಸಹಿತ ಕೊರೊನಾ ವಾರಿಯರ್ಸ್ ಸೇವೆಯನ್ನು ಶ್ಲಾಘಿಸಿ, ಜಿಲ್ಲೆಯಲ್ಲಿ ಮಾರಕ ರೋಗ ಹರಡದಂತೆ ಶ್ರಮಿಸಿರುವ ಕುರಿತು ಜಿಲ್ಲೆಯ ನಾಗರಿಕರು ‘ಶಕ್ತಿ’ ಮೂಲಕ ಬರೆದಿರುವ ಕಾರ್ಡ್‍ಗಳನ್ನು ಗೌರವಪೂರ್ವಕವಾಗಿ ಸಚಿವರಿಂದ ಜಿಲ್ಲಾಧಿಕಾರಿ ಹಾಗೂ ಎಸ್‍ಪಿ ಇವರಿಗೆ ಹಸ್ತಾಂತರಿಸಲಾಯಿತು.

‘ಶಕ್ತಿ’ ಮೂಲಕ ಆಹ್ವಾನಿಸಿದ್ದ ಪತ್ರಗಳನ್ನು ಅಂಚೆಕಾರ್ಡ್ ಮೂಲಕ ಜಿಲ್ಲೆಯ ನೂರಾರು ನಾಗರಿಕರು ಪತ್ರಿಕಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಈ ಕಾರ್ಡ್‍ಗಳನ್ನು ಪತ್ರಿಕಾ ಆಡಳಿತ ಸಂಪಾದಕ ಜಿ. ಚಿದ್ವಿಲಾಸ್ ಅವರು ಇಂದು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರುಗಳಿಗೆ ಹಸ್ತಾಂತರಿಸಿದರು. ಜಿಲ್ಲಾಡಳಿತಕ್ಕೆ ಈ ವೇಳೆÀ ಸಚಿವರು, ಜನಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದರು.