ನಾಪೆÇೀಕ್ಲು, ಮೇ 22: ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಗದ್ದೆ ಉಳುವ ಒಂದು ಎತ್ತನ್ನು ಕಳವು ಮಾಡಿರುವುದಾಗಿ ಪಾರಾಣೆ ಕೊಣಂಜಗೇರಿಯ ಸಿ.ಎಂ. ಲೋಕೇಶ್ ನಾಪೆÇೀಕ್ಲು ಪೊಲೀಸರಿಗೆ ದೂರು ನೀಡಿದ್ದಾರೆ. ಮಾಮೂಲಿಯಂತೆ ತಾ. 21 ರಂದು ಸಂಜೆ ಎರಡು ಉಳುವ ಎತ್ತು ಮತ್ತು ಒಂದು ಹಸು ಕರುವನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೇವು ಹಾಕಿ ಲೋಕೇಶ್ ಮನೆಗೆ ಬಂದಿದ್ದಾರೆ. ಮಾರನೇ ದಿನ ಬೆಳಿಗ್ಗೆ ಲೋಕೇಶ್ ಕೊಟ್ಟಿಗೆಗೆ ಬಂದು ನೋಡಿದಾU ಒಂದು ಎತ್ತು ಹಗ್ಗದೊಂದಿಗೆ ಕಾಣೆಯಾಗಿರುತ್ತದೆ. ಹುಡುಕಲಾಗಿ ಎಲ್ಲೂ ಪತ್ತೆಯಾಗಿಲ್ಲ. ಪಕ್ಕದ ಚೆರುವಾಳಂಡ ಮುತ್ತಣ್ಣ ಅವರ ಕೊಟ್ಟಿಗೆಯ ಬಳಿ ಹಿಂದಿನ ರಾತ್ರಿ ಯಾರೋ ಸುಳಿದಾಡಿದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಕಳ್ಳತನ ಮಾಡಿರುವವರನ್ನು ಪತ್ತೆಹಚ್ಚಬೇಕಾಗಿ ಲೋಕೇಶ್ ಮನವಿ ಸಲ್ಲಿಸಿದ್ದು, ನಾಪೆÇೀಕ್ಲು ಠಾಣಾಧಿಕಾರಿ ಆರ್. ಕಿರಣ್ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ಬಲೆ ಬಿಸಿದ್ದಾರೆ.