ಮಡಿಕೇರಿ, ಮೇ 22: ಲಾಕ್ಡೌನ್ನಿಂದಾಗಿ ಜಿಲ್ಲೆಯ ಹೋಂಸ್ಟೇಗಳಿಗೆ ಆರ್ಥಿಕ ನಷ್ಟ ಉಂಟಾಗಿದ್ದು, ನೋಂದಾಯಿತ ಹೋಂಸ್ಟೇಗಳಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಹೋಂಸ್ಟೇ ಸಂಘದ ವತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಹೋಂಸ್ಟೇಗಳಿಗೆ 2 ವರ್ಷಗಳ ಕಾಲ ಎಲ್ಲಾ ರೀತಿಯ ತೆರಿಗೆ ವಿನಾಯಿತಿ ನೀಡಬೇಕೆಂದು ಕೂಡ ಈ ಸಂದರ್ಭ ಕೋರಲಾಯಿತು.
ಸಂಘದ ಅಧ್ಯಕ್ಷÀ್ಷ ಬಿ.ಜಿ.ಅನಂತಶಯನ, ಗೌರವ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ , ಪದಾಧಿಕಾರಿಗಳಾದ ಕರುಂಬಯ್ಯ, ಮುದ್ದಪ್ಪ, ಶಶಿಮೊಣ್ಣಪ್ಪ, ಮೋಂತಿ ಗಣೇಶ್, ಉಷಾಗಣಪತಿ ಹಾಜರಿದ್ದರು.