ವೀರಾಜಪೇಟೆ, ಮೇ 22: ಕಷ್ಟದಲ್ಲಿರುವ ಬಡ ವರ್ಗಗಳನ್ನು ಗುರುತಿಸಿ ಧಾನ ಮಾಡುವುದು ದೇವರ ಮೆಚ್ಚುವ ಕೆಲಸವಾಗಿದೆ ಎಂದು ಎ.ಐ.ಕೆ.ಎಂ.ಸಿ.ಸಿ. ಕೊಡಗು ಜಿಲ್ಲಾ ಸಂಚಾಲಕ ಷಂಶುದ್ದೀನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅಖಿಲ ಭಾರತ ಕೇರಳ ಮುಸ್ಲಿಂ ಕಲ್ಚರ್ ಸೆಂಟರ್ ಕೊಡಗು ಶಾಖೆ ವತಿಯಿಂದ ವೀರಾಜಪೇಟೆ ಗೌರಿಕೆರೆಯ ಸಂಶುಲ್ ಉಲಮಾ ಮದ್ರಾಸ ಸಭಾಂಗಣದಲ್ಲಿ ನಡೆದ ಈದ್ ಕಿಟ್ ವಿತರಣಾ ಸಮಾರಂಭ ದಲ್ಲಿ ಮಾತನಾಡಿದರು. ಎ.ಐ.ಕೆ.ಎಂ. ಸಿ.ಸಿ.ನ ವೀರಾಜಪೇಟೆ ವಲಯ ಸಂಚಾಲಕ ರಫೀಕ್ ಸಿ.ಹೆಚ್. ಪ್ರಾಸ್ತಾವಿಕ ಮಾತನಾಡಿದರು.

ಸಮಾರಂಭದ ಮೊದಲಿಗೆ ಸಾದಲಿ ಮಸೀದಿಯ ಅಬ್ದುಲ್ಲಾ ಮುಸ್ಲಿಯಾರ್ ಅವರು ಪ್ರಾರ್ಥನೆ ಮಾಡಿದರು. ಕಿಟ್ ವಿತರಣಾ ಸಮಾರಂಭಕ್ಕೆ ಜಿಲ್ಲೆಯ ವಿವಿಧ ಭಾಗ ಗಳಿಂದ ಸಂಘಟನೆಯ ಪ್ರತಿನಿಧಿಗಳು ಆಗಮಿಸಿದ್ದರು. 200 ಬಡ ಕುಟುಂಬ ಗಳಿಗೆ ಕಿಟ್ ವಿತರಿಸಲಾಯಿತು.