ಸುಂಟಿಕೊಪ್ಪ, ಮೇ 21: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇರಿ ಗ್ರಾಮದ ಚಾಮುಂಡೇಶ್ವರಿ ಕಾಲೋನಿಗೆ ಬೀದಿ ದೀಪ ಅಳವಡಿಕೆಗೊಳಿಸಲಾಗಿದ್ದು, ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ರೈ ಚಾಲನೆ ನೀಡಿದರು.

ಈ ಭಾಗದ ಜನತೆಯು ಹಲವು ವರ್ಷಗಳಿಂದ ಬೀದಿ ದೀಪ ಅಳವಡಿಸುವಂತೆ ಕೆದಕಲ್ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಈ ಭಾಗದ ನಿವಾಸಿಗಳ ಬೇಡಿಕೆಯಂತೆ ಕೆದಕಲ್ ಪಂಚಾಯಿತಿ ವತಿಯಿಂದ ನೂತನವಾಗಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಈ ಸಂದರ್ಭ ಪಂಚಾಯಿತಿ ಸದಸ್ಯೆ ಹರಿಣಿ, ಗುತ್ತಿಗೆದಾರ ರಮೇಶ್ ರೈ, ಗ್ರಾಮದ ಜನತೆ ಹಾಜರಿದ್ದರು.