ಗುಡ್ಡೆಹೊಸೂರು, ಮೇ 21: ಇಲ್ಲಿಗೆ ಸನಿಹದ ಆನೆಕಾಡು ವಿಭಾಗದಲ್ಲಿ ರಾಜ್ಯ ಹೆದ್ದಾರಿ ರಸ್ತೆಯ ಎರಡು ಬದಿಯಲ್ಲಿದ್ದ ನಿರುಪಯುಕ್ತ ವಸ್ತುಗಳನ್ನು ಕಸಕಡ್ಡಿಯನ್ನು ಸಂಗ್ರಹಿಸಿ ಬೇರೆಡೆಗೆ ಸಾಗಿಸಲಾಯಿತು.

ಈ ಕಾರ್ಯವನ್ನು ಗೋಣಿಕೊಪ್ಪದ ಕೂರ್ಗ್ ಬೈಕಿಂಗ್ ಬ್ರದರ್ಸ್ ಸಂಸ್ಥೆಯ ಸದಸ್ಯರು ನಡೆಸಿದರು. ಈ ಕಾರ್ಯಕ್ಕೆ ಸ್ಥಳೀಯ ಅರಣ್ಯ ಇಲಾಖೆಯವರು ಮತ್ತು ಗುಡ್ಡೆಹೊಸೂರು ಗ್ರಾ.ಪಂ. ಸಹಕಾರ ನೀಡಿತ್ತು. ಸಂಸ್ಥೆಯ ಒಟ್ಟು 25 ಮಂದಿ ಸ್ವಚ್ಛತಾ ಆಂದೋಲನ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಕೊರೊನಾ ನಿಯಮವನ್ನು ಪಾಲಿಸಲಾಗಿತ್ತು. ಸ್ಥಳಕ್ಕೆ ಗುಡ್ಡೆಹೊಸೂರು ಪಿ.ಡಿ.ಓ. ಭೇಟಿ ನೀಡಿದ್ದರು. ಪಂಚಾಯಿತಿ ವಾಹನದಲ್ಲಿ ಕಸ ತುಂಬಿ ಬೇರೆಡೆಗೆ ಸಾಗಿಸಲಾಯಿತು. ಸಂಸ್ಥೆಯ ದರ್ಶನ್, ದಿಲನ್, ಹುನಿರ್ ಮುಂತಾದವರು ಭಾಗವಹಿಸಿದ್ದರು. ಸುಮಾರು 3 ಕಿ.ಮೀ. ರಸ್ತೆಯ ಬದಿಯನ್ನು ಶುಚಿಗೊಳಿಸಲಾಯಿತು.