ನಾಪೆÇೀಕ್ಲು, ಮೇ 21: ನಾಪೆÇೀಕ್ಲು ವ್ಯಾಪ್ತಿಯ ಬಹುವರ್ಷಗಳ ಕನಸಾಗಿದ್ದ ನಾಪೆÇೀಕ್ಲು-ಪಾರಾಣೆ ಸಂಪರ್ಕ ರಸ್ತೆ ಕನಸು ನನಸಾಗುವ ಯಾವದೇ ಲಕ್ಷಣಗಳು ಕಂಡುಬರುತ್ತಿಲ್ಲ. ಬದಲಿಗೆ ರಸ್ತೆ ದಿನದಿಂದ ದಿನಕ್ಕೆ ಮತ್ತಷ್ಟು ಹದಗೆಡುವ ಮೂಲಕ ವಾಹನ ಸಂಚಾರ ದುಸ್ತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆ ಕಾಮಗಾರಿ ಆರಂಭಗೊಂಡು ಎರಡು ವರ್ಷಗಳು ಸಂದರೂ ಯಾವದೇ ಪ್ರಗತಿ ಕಂಡು ಬಂದಿಲ್ಲ. ರಸ್ತೆ ಕಾಮಗಾರಿ ಆರಂಭಿಸಲು ರಸ್ತೆ ಬದಿ ಸಮತಟ್ಟು ಮಾಡಲಾಗಿರುವದು ಹೊರತುಪಡಿಸಿದರೆ ಇಂದಿಗೂ ಅದೇ ಸ್ಥಿತಿ ಮುಂದುವರೆದಿದೆ. ರಸ್ತೆ ಕಲ್ಲುಗಳಿಂದ ಕೂಡಿದ್ದು ವಾಹನ ಸಂಚಾರವೇ ಅಸಾಧ್ಯ ಎಂಬಂತಾಗಿದೆ. ಇನ್ನಾದರೂ ಸಂಬಂಧಿಸಿದವರು ಎಚ್ಚೆತ್ತುಕೊಳ್ಳದಿದ್ದರೆ, ಮಳೆಗಾಲದಲ್ಲಿ ನಾಪೆÇೀಕ್ಲುವಿನಿಂದ ಪಾರಾಣೆ ಮತ್ತು ವೀರಾಜಪೇಟೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಸಾಧ್ಯತೆ ಇದೆ.

ಈ ಮಾರ್ಗದ ಮಧ್ಯೆಯಿರುವ ಎತ್ತುಕಡವು ಸೇತುವೆ, ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾದ ಈ ಸೇತುವೆಗೆ ಇಲ್ಲಿಯವರೆಗೆ ಮರು ಕಾಯಕಲ್ಪ ದೊರೆತಿಲ್ಲ. ಸೇತುವೆಯ ಕಂಬಗಳು ಶಿಥಿಲಗೊಳ್ಳುತ್ತಿದೆ. ಅಲ್ಲಲ್ಲಿ ಅಡಿಪಾಯದ ಕಲ್ಲುಗಳ ಕುಸಿಯುತ್ತಿವೆ. ಈ ಸೇತುವೆ ಕುಸಿದರೆ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳಲಿದೆ ಎಂಬದು ಸ್ಥಳೀಯರ ಆತಂಕವಾಗಿದೆ.

7.5 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡ ಕಡಂಗ - ಬೇತು ಸಂಪರ್ಕ ರಸ್ತೆಯ ಗುತ್ತಿಗೆದಾರರು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ನಾಪತ್ತೆಯಾಗಿದ್ದಾರೆ. ಪೂರ್ತಿ ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ವಾಹನ ಓಡಿಸಲು ಚಾಲಕರು ಹರಸಾಹಸ ಪಡುತ್ತಿದ್ದಾರೆ. ಇದೀಗ ಮಳೆ ಸುರಿಯುತ್ತಿರುವದರಿಂದ ರಸ್ತೆಯಲ್ಲಿ ನೀರು ನಿಂತು ನಡೆದಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಸ್ತೆ ದುರಸ್ತಿಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು ಎಂದು ಬೇತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಲಾಕ್ ಡೌನ್‍ನಿಂದ ಸಮಸ್ಯೆಯಾಗಿದೆ. ಡಾಮರೀಕರಣವನ್ನು ಯಂತ್ರೋಪಕರಣಗಳಿಂದ ಮಾಡುವದರಿಂದ ಯಂತ್ರಗಳು ಸಿಗದೆ ಕಾಮಗಾರಿ ತಡವಾಗಿದೆ. ಸದ್ಯದಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವದು. ಎಂದು ಗುತ್ತಿಗೆದಾರ ಶರಣು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಪ್ರತೀ ದಿನ ಸುರಿಯುತ್ತಿ ರುವ ಮಳೆಯ ಕಾರಣದಿಂದಾಗಿ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿದೆ. ಸ್ಥಳೀಯರ ಸಹಕಾರದೊಂದಿಗೆ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗುವದು ಎಂದಿದ್ದಾರೆ. ನಾಪೆÇೀಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ ಹೇಳಿದ್ದಾರೆ. -ಪಿ.ವಿ.ಪ್ರಭಾಕರ್