ಗೋಣಿಕೊಪ್ಪ ವರದಿ, ಮೇ 21 : ಇಲ್ಲಿನ ಮಾಂಡೋವಿ ಕಾರ್ ಶೋರೂಮ್‍ನಲ್ಲಿ ಜಿಲ್ಲಾ ರಕ್ತನಿಧಿ ಕೇಂದ್ರ ಹಾಗೂ ಸ್ವಯಂ ಪ್ರೇರಣ ಬಳಗ ವತಿಯಿಂದ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು 30 ಜನರು ರಕ್ತದಾನ ಮಾಡಿದರು. ಸುಮಾರು 10,500 ಮಿಲಿ ಲೀಟರ್ ರಕ್ತ ಸಂಗ್ರಹಿಸಲಾಯಿತು. ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಪಿ. ಕರುಂಬಯ್ಯ, ಸ್ವಯಂ ಪ್ರೇರಣಾ ಬಳಗ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ಪ್ರಮುಖರಾದ ಚಿರಿಯಪಂಡ ಲತಾ ಪೂಣಚ್ಚ, ಮೋರ್ಕಂಡ ಮೀನಾ ಗಣಪತಿ, ಕೊಕ್ಕೇಂಗಡ ರಾಣಿ ಸುಬ್ರಮಣಿ, ಮಂಡಂಗಡ ಪುನಿತಾ, ಮೋರ್ಕಂಡ ನಿಖಿಲ್ ಮಂದಣ್ಣ ಇದ್ದರು.