ಮಡಿಕೇರಿ, ಮೇ 21: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಇಂದು ಗೋಣಿಕೊಪ್ಪಲು ನಗರದಲ್ಲಿ ಸಾರ್ವಜನಿಕ ಹಿತದೃಷ್ಟಿ ಮನವಿಯ ಪೋಸ್ಟರನ್ನು ಪ್ರಚಾರಗೊಳಿಸಲಾಯಿತು. ಸಾರ್ವಜನಿಕ ಸ್ಥಳವನ್ನು ಶುಚಿಯಾಗಿಡುವ ನಿಟ್ಟಿನಲ್ಲಿ ಅಲ್ಲಲ್ಲಿ ಉಗುಳದಂತೆ, ಮಾಸ್ಕ್ ಕಡ್ಡಾಯದ ಬಗ್ಗೆ ಮತ್ತು ಉಲ್ಲಂಘಿಸಿದಲ್ಲಿ ತೆರಬೇಕಾದ ದಂಡದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಸುನೀಲ್ ಮಾದಪ್ಪ ಪ್ರಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಚೇಂಬರ್‍ನ ಉಪಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಗೋಣಿಕೊಪ್ಪಲು ಚೇಂಬರ್‍ನ ಪ್ರದಾನ ಕಾರ್ಯದರ್ಶಿ ತೆಕ್ಕಡೆ ಕಾಶಿ, ನಿರ್ದೇಶಕರಾದ ಪಿ.ಜಿ.ರಾಜಶೇಖರ್, ಸುಮಿ ಸುಬ್ಬಯ್ಯ, ನಾಸಿರ್ ಉಪಸ್ಥಿತರಿದ್ದರು.
ಗೋಣಿಕೊಪ್ಪಲಿನ ಪ್ರಮುಖ ಸ್ಥಳಗಳಲ್ಲಿ, ಬಸ್ ನಿಲ್ದಾಣ, ಆಸ್ಪತ್ರೆ, ಚೆಸ್ಕಾಂ ಕಚೇರಿಗಳ ಮುಂಭಾಗದಲ್ಲಿ ಮಾಹಿತಿ ಪ್ರಚಾರ ಫಲಕವನ್ನು ಪ್ರಚುರಪಡಿಸಲಾಯಿತು.