ಗೋಣಿಕೊಪ್ಪ ವರದಿ, ಮೇ 19 : ಕೊಟ್ಟಗೇರಿ ಗ್ರಾಮದಲ್ಲಿ ಸಾಕು ಹಂದಿ ಮೇಲೆ ಹುಲಿ ದಾಳಿ ನಡೆಸಿ ಘಾಸಿಗೊಳಿಸಿದೆ. ಅಲ್ಲಿನ ಪೆಮ್ಮಂಡ ಬೋಪಣ್ಣ ಎಂಬವರಿಗೆ ಸೇರಿದ ಹಂದಿಯನ್ನು ಮನೆ ಸಮೀಪ ಕಟ್ಟಲಾಗಿತ್ತು. ರಾತ್ರಿ ಹುಲಿ ದಾಳಿ ಮಾಡಿದ್ದು, ಹಂದಿಯ ಕತ್ತು, ಬೆನ್ನು, ಹೊಟ್ಟೆ ಭಾಗಕ್ಕೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.