ಮಡಿಕೇರಿ, ಮೇ 19: ಬೈಕ್‍ಗಳು ಹಾಗೂ ಬಂದೂಕು ಕಳವು ಪ್ರಕರಣ ಗಳನ್ನು ಬೇಧಿಸಿರುವ ಮಡಿಕೇರಿ ನಗರ ಪೊಲೀಸರು ನಾಲ್ವರು ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ದ್ದಾರೆ ಎಂದು ಎಸ್ಪಿ ಡಾ. ಸುಮನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಜನವರಿ 16 ರಂದು ಜಿಲ್ಲಾ ಆಸ್ಪತ್ರೆಯ ಆವರಣದಿಂದ ಕಳುವಾಗಿದ್ದ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಕಳವು ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿ ಗಳಾದ ಮೂರ್ನಾಡು ಕೊಡವ ಸಮಾಜ ಸಮೀಪದ ಕೆ.ಬಿ. ಅರುಣ್, ಮದೆನಾಡು 2ನೇ ಮೊಣ್ಣಂಗೇರಿಯ ಎಂ. ಸಚಿನ್, ಮೂರ್ನಾಡು ಹೊದ್ದೂರು ಗ್ರಾಮದ ಕಾರ್ತಿಕ್ ಹಾಗೂ ಮೂರ್ನಾಡು ಐಕೊಳ ಗ್ರಾಮದ ಕೆ.ಆರ್. ವಾಸು ಎಂಬವರು ಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಗೊಳಪಡಿಸಿದಾಗ, ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದ್ದ ಕಳವು ಪ್ರಕರಣ ಮಾತ್ರವಲ್ಲದೇ ಇನ್ನೂ ಕೆಲವೆಡೆ ನಡೆದ ಕಳವು ಪ್ರಕರಣಗಳಲ್ಲಿ ಈ ಖದೀಮರು ಭಾಗಿಯಾಗಿರುವುದು ತಿಳಿದು ಬಂದಿದೆ.

ಮೂರು ಸ್ಪ್ಲೆಂಡರ್, ಒಂದು ಟಿವಿಎಸ್ ಹಾಗೂ ಒಂದು ಆರ್‍ಎಕ್ಸ್ ಬೈಕ್‍ಗಳನ್ನು ಇವರುಗಳು ಕಳವು ಮಾಡಿದ್ದು,

(ಮೊದಲ ಪುಟದಿಂದ) ಇದರೊಂದಿಗೆ ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡಂಗದಲ್ಲಿನ ತೋಟವೊಂದರ ಮಾಲೀಕರ ಮನೆಯಲ್ಲಿ ಪಾಯಿಂಟ್ 32 ವೆಬ್ಲಿ ಸ್ಕಾಟ್ ಬಂದೂಕನ್ನು ಸಹ ಕಳವು ಮಾಡಿರುವುದು ಬಹಿರಂಗಗೊಂಡಿದೆ. ಬಂಧಿತರಿಂದ ಕಳವು ಮಾಡಿದ್ದ ಮಾಲುಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಬಂಧಿತರಲ್ಲಿ ಅರುಣ ಹಾಗೂ ಕಾರ್ತಿಕ್ ಕೂಲಿ ಕಾರ್ಮಿಕರಾಗಿದ್ದು, ವಾಸು ಹಾಗೂ ಸಚಿನ್ ಖಾಸಗಿ ಬಸ್ ಕಂಡಕ್ಟರ್‍ಗಳಾಗಿದ್ದಾರೆ ಎಂದು ಡಾ. ಸುಮನ್ ವಿವರಿಸಿದರು.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸುಮನ್ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕಿ ಕು. ಅಂತಿಮ ಎಂ.ಟಿ., ಸಹಾಯಕ ಉಪ ನಿರೀಕ್ಷಕ ಹೊನ್ನಪ್ಪ ಕೆ.ಜಿ., ಮಡಿಕೇರಿ ನಗರ ವೃತ್ತ ಕಚೇರಿಯ ಕಿರಣ್, ಸಿ.ಯು. ಚರ್ಮಣ, ಮಡಿಕೇರಿ ನಗರ ಪೊಲೀಸ್ ಠಾಣಾ ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ. ದಿನೇಶ್, ಶ್ರೀನಿವಾಸ, ಪ್ರವೀಣ್, ಬಿ.ಕೆ., ನಾಗರಾಜ್ ಕಡಗನ್ನವರ್, ಸಿಬ್ಬಂದಿಗಳಾದ ಅರುಣ್ ಕುಮಾರ್ ಬಿ.ಜಿ,, ಉತ್ತಪ್ಪ ಕೆ.ಎ., ಸುನಿಲ್ ಬಿ.ಓ., ನಂದಕುಮಾರ್, ಓಮನ ಸಿ.ಜಿ., ಭವಾನಿ, ಸೌಮ್ಯ, ಜಿಲ್ಲಾ ಪೊಲೀಸ್ ಕಚೇರಿಯ ಸಿ.ಕೆ. ರಾಜೇಶ್ ಮತ್ತು ಗಿರೀಶ್ ಇವರುಗಳು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.