*ಗೋಣಿಕೊಪ್ಪಲು: ಕೋಣನಕಟ್ಟೆ ಬ್ಯಾಂಕ್ ಆಫ್ ಬರೋಡಾ ವತಿಯಿಂದ 25 ಜನ ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು.

ಕಿಟ್ ವಿತರಿಸಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ರೊನಾಲ್ಡ್ ಡಿಸೋಜ, ಅನೇಕ ಕುಟುಂಬಗಳು ಕೆಲಸವಿಲ್ಲದೆ ತೀವ್ರತರದ ಸಮಸ್ಯೆ ಎದುರಿಸುತ್ತಿವೆ. ಇಂತಹವರ ಸೇವೆ ಸಲ್ಲಿಸುವುದು ಸಮಾಜದ ಪ್ರಮುಖ ಕರ್ತವ್ಯವಾಗಿದೆ. ಕೊರೊನಾ ತಂದ ಸಂಕಷ್ಟ ನಿವಾರಣೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.

ಶಾಖಾ ಸಹಾಯಕ ವ್ಯವಸ್ಥಾಪಕ ನಿಶಾಂತ್ ದೀಪಕ್ ಮೆಶ್ರಮ್, ಸಿಬ್ಬಂದಿ ವೆಂಕಟೇಶ್ ಅಕುಲಾ, ಉಷಾ ಹಾಜರಿದ್ದರು.ವೀರಾಜಪೇಟೆ: ಲಾಕ್‍ಡೌನ್ ನಿರ್ಬಂಧದಿಂದ ಕಂಗಾಲಾಗಿರುವ ವೀರಾಜಪೇಟೆ ವಿಭಾಗದ ಟೈಲರ್ ವೃತ್ತಿಯಲ್ಲಿರುವ ಸುಮಾರು 108 ಮಂದಿ ಟೈಲರ್‍ಗಳಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಪಡಿತರ ಆಹಾರ ಕಿಟ್‍ಗಳನ್ನು ವಿತರಿಸಿದರು.

ವೀರಾಜಪೇಟೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ಟೈಲರ್‍ಗಳಿಗೆ ಕಿಟ್ ವಿತರಣೆ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ. ಬೋಪಯ್ಯ ಅವರು ಸಂಕಷ್ಟದಲ್ಲಿರುವವರಿಗೆ ಪರಿಹಾರ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ಪಂದಿಸುತ್ತಿವೆ. ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ರಘು ನಾಣಯ್ಯ, ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮತ್ತಿತರರು ಹಾಜಿರಿದ್ದರು.ಗೋಣಿಕೊಪ್ಪ ವರದಿ: ಕೈಕೇರಿ ಮತ್ತು ಗೋಣಿಕೊಪ್ಪ ಬ್ಯಾಂಕ್ ಆಫ್ ಬರೊಡಾ ಶಾಖೆ ವತಿಯಿಂದ ಸುಮಾರು 25 ಜನರಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು.

ಹಾತೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಕೈಕೇರಿ ಶಾಖೆ ವ್ಯವಸ್ಥಾಪಕ ಹರೀಶ್ ನಾಯಕ್ ಮಾತನಾಡಿ, ಲಾಕ್‍ಡೌನ್ ಹಿನ್ನೆಲೆ ಬ್ಯಾಂಕ್‍ನ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಯೋಜನೆ ಮೂಲಕ ಕಿಟ್ ನೀಡಲಾಗುತ್ತಿದೆ ಎಂದರು. ಈ ಸಂದರ್ಭ ಗೋಣಿಕೊಪ್ಪ ಶಾಖೆ ವ್ಯವಸ್ಥಾಪಕ ಭೂಷಣ್, ಕೃಷಿ ಅಧಿಕಾರಿ ನಾಗರಾಜು, ಸಹಾಯಕ ವ್ಯವಸ್ಥಾಪಕ ತಿರುಮಲೈ, ಹಾತೂರು ಗ್ರಾ.ಪಂ. ಉಪಾಧ್ಯಕ್ಷ ದರ್ಶನ್ ನಂಜಪ್ಪ ಇತರರು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಇಲ್ಲಿನ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಫ್ರೆಂಡ್ಸ್ ಯೂತ್ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 30 ಮಂದಿ ಕಡುಬಡವರಿಗೆ ಮತ್ತು ದಿವ್ಯಾಂಗರಿಗೆ ನಿತ್ಯೋಪಯೋಗಿ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲಾಯಿತು.

ಈ ಸಂದರ್ಭ ಸಂಘದ ಸ್ಥಾಪಕ ಅಧ್ಯಕ್ಷ ವಸಂತ ಕುಮಾರ್, ಅಧ್ಯಕ್ಷ ಶಂಕರ ನಾರಾಯಣ, ಮಾಜಿ ಅಧ್ಯಕ್ಷ ಬಿ.ಜಿ. ರಮೇಶ್, ಖಜಾಂಚಿ ಅಂಬೆಕಲ್ ಚಂದ್ರಶೇಖರ್, ಉಪಾಧ್ಯಕ್ಷರುಗಳಾದ ಪೌಲೋಸ್, ರಾಧಾಕೃಷ್ಣ, ಅಜಿತ್ ಕುಮಾರ್, ವಿನೋದ್, ಜಗದೀಶ್, ಪಂಚಾಯಿತಿ ಸದಸ್ಯ ಸತೀಶ್, ದಾನಿಗಳಾದ ನೀಲಮ್ಮ ಪೆಮ್ಮಯ್ಯ, ಹಾಜರಿದ್ದರು.ಸೋಮವಾರಪೇಟೆ: ಲಾಕ್‍ಡೌನ್ ಹಿನ್ನೆಲೆ ಭಾರತೀಯ ಜೀವ ವಿಮಾ ನೌಕರರ ಸಂಘ ಸೋಮವಾರಪೇಟೆ ಶಾಖೆ ವತಿಯಿಂದ ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ಮೈಸೂರು ವಿಮಾ ನಿಗಮ ನೌಕರರ ಸಂಘದ ಉಪಾಧ್ಯಕ್ಷೆ ಎಸ್.ಎಂ. ಪಾರ್ವತಿ, ಶಾಖಾ ಘಟಕದ ಅಧ್ಯಕ್ಷ ಹೆಚ್.ಟಿ. ಬಿದ್ದಪ್ಪ, ಕಾರ್ಯದರ್ಶಿ ಕೆ.ಕೆ. ಪ್ರೇಮ ಹಾಗೂ ಪದಾಧಿಕಾರಿಗಳು ಕಿಟ್‍ಗಳನ್ನು ವಿತರಿಸಿದರು. ಗೋಣಿಕೊಪ್ಪ ವರದಿ: ಸ್ಥಳೀಯ ಮತ್ತು ಕೈಕೇರಿ ಬ್ಯಾಂಕ್ ಆಫ್ ಬರೊಡಾ ಶಾಖೆ ವತಿಯಿಂದ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಯೋಜನೆಯಡಿ ಸ್ಥಳೀಯವಾಗಿ ಸುಮಾರು 40 ಜನರಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭ ಕೈಕೇರಿ ಶಾಖೆ ವ್ಯವಸ್ಥಾಪಕ ಹರೀಶ್ ನಾಯಕ್, ಗೋಣಿಕೊಪ್ಪ ಶಾಖೆ ವ್ಯವಸ್ಥಾಪಕ ಭೂಷಣ್, ಕೃಷಿ ಅಧಿಕಾರಿ ನಾಗರಾಜು, ಸಹಾಯಕ ವ್ಯವಸ್ಥಾಪಕ ತಿರುಮಲೈ, ಗೋಣಿಕೊಪ್ಪ ಗ್ರಾ.ಪಂ. ಪಿಡಿಓ ಶ್ರೀನಿವಾಸ್ ಉಪಸ್ಥಿತರಿದ್ದರು.