ಎಫ್.ಎಸ್. ಎಲ್. ವರದಿಗಾಗಿ ಕಾಯುತ್ತಿರುವ ಪೆÇಲೀಸರು

ಪೆÇನ್ನಂಪೇಟೆ, ಮೇ 20: ಎತ್ತೊಂದನ್ನು ಖರೀದಿಸಿ ಕಾಲ್ನಡಿಗೆಯಲ್ಲಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ನಿಗೂಢವಾಗಿ ನಾಪತ್ತೆಯಾಗಿ ಐದು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದ ಬೇಟೋಳಿ ಗುಂಡಿಕೆರೆಯ ಎಂ.ಎಂ. ಮೂಸ ಅವರ ಅನುಮಾನಾಸ್ಪದ ಸಾವಿನ ರಹಸ್ಯ ಇದುವರೆಗೂ ಬಯಲಾಗದಿರುವುದು ಮೂಸ ಅವರ ಕುಟುಂಬದವರ ಮತ್ತು ಗುಂಡಿಕೆರೆ ಗ್ರಾಮಸ್ಥರ ನೆಮ್ಮದಿ ಕೆಡಿಸಿದೆ.

ತಂದೆಯ ನಿಗೂಢ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಅದು ಸಹಜ ಸಾವು ಅಲ್ಲವೇ ಅಲ್ಲ ಎಂದು ಮೂಸ ಅವರ ಪುತ್ರ ಎಂ.ಎಂ. ಸಲಾಂ ದೃಢ ನುಡಿಗಳನ್ನಾಡಿದ್ದಾರೆ.

ಮನೆಯವರು ಮತ್ತು ಗ್ರಾಮಸ್ಥರು ಸೇರಿ ಮೂಸ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಇರುವ ಅನುಮಾನಗಳ ಕುರಿತು ದೊಡ್ಡ ಪಟ್ಟಿಯನ್ನೇ ತಯಾರಿಸಿದ್ದು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾದ ಡಾ.ಸುಮನ್ ಡಿ.ಪಿ. ಅವರನ್ನು ಭೇಟಿ ಮಾಡಿ ಪಟ್ಟಿಯನ್ನು ನೀಡಿದ್ದಾರೆ. ಅಲ್ಲದೆ ತಂದೆಯ ನಿಗೂಢ ಸಾವಿನ ಕುರಿತು ಸತ್ಯಾಂಶವನ್ನು ಹೊರಗೆಳೆದು ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮೂಸ ಅವರ ಪುತ್ರ ಸಲಾಂ ಅವರು ಎಸ್ಪಿ ಅವರ ಬಳಿ ಮನವಿ ಮಾಡಿದ್ದಾರೆ.

ಪಟ್ಟಿಯನ್ನು ಪರಿಶೀಲಿಸಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು, ಮೂಸ ಸಾವಿಗೆ ಸಂಬಂಧಿಸಿದಂತೆ ವಿವಿಧ ದೃಷ್ಟಿಕೋನಗಳಿಂದ ತನಿಖೆ ನಡೆಸಲಾಗಿದೆ. ಅಲ್ಲದೆ ಈ ಬಗ್ಗೆ ಕೆಲವರನ್ನು ವಿಚಾರಣೆಯೂ ನಡೆಸಲಾಗಿದೆ. ಮೂಸ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್.ಎಸ್.ಎಲ್) ವರದಿ ಇನ್ನೂ ಪೆÇಲೀಸ್ ಇಲಾಖೆಯ ಕೈಸೇರಿಲ್ಲ. ಮರಣೋತ್ತರ ಪರೀಕ್ಷೆಯ ವೈದ್ಯರ ವರದಿ ದೊರೆತಿದ್ದರೂ ಇಲಾಖೆಯ ಶಿಷ್ಟಾಚಾರದಂತೆ ಎಫ್.ಎಸ್.ಎಲ್ ವರದಿ ಬರುವವರೆಗೂ ಅದನ್ನು ಬಹಿರಂಗಪಡಿಸುವಂತಿಲ್ಲ. ಎಫ್.ಎಸ್.ಎಲ್. ವರದಿ ಬಂದ ಬಳಿಕ ಅದನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಮುಂದಿನ ಹಂತಕ್ಕೆ ಪ್ರವೇಶಿಸ ಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.