ಗೋಣಿಕೊಪ್ಪ ವರದಿ, ಮೇ 18 : ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ನಲ್ಲೂರು ಗ್ರಾಮದ ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರ ಗದ್ದೆಯಲ್ಲಿ ಕೆವಿಕೆ ಅನುಷ್ಠಾನಗೊಳಿಸಿರುವ ಪ್ರಾತ್ಯಕ್ಷಿಕೆ ಬಿದಿರು ತಾಕಿಗೆ ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್ ಮತ್ತು ಡಾ. ಪ್ರಭಾಕರ್ ಭೇಟಿ ನೀಡಿ ಬೆಳವಣಿಗೆ ಬಗ್ಗೆ ಅರಿತುಕೊಂಡರು.

ಸುಮಾರು 1 ಎಕರೆ ಗದ್ದೆಯಲ್ಲಿ ಬೆಳೆದಿರುವ ಭೀಮಾ ಬಿದಿರು ಬೆಳವಣಿಗೆಗೆ ಅಗತ್ಯ ಸಲಹೆ ನೀಡಿದರು. 7 ತಿಂಗಳ ಅವಧಿಯಲ್ಲಿ 10 ಅಡಿಗಳಷ್ಟು ಬೆಳೆದಿರುವ ಬಿದಿರು ಬೆಳೆಯಿಂದ ಹೆಚ್ಚಿನ ನಿರೀಕ್ಷೆ ಸಾಧ್ಯವಿದೆ ಎಂದು ಡಾ. ಸಾಜುಜಾರ್ಜ್ ಮಾಹಿತಿ ನೀಡಿದರು.

ಇದರೊಂದಿಗೆ ಅಂತರ ಬೆಳೆಯಾಗಿ ಬೆಳೆದಿರುವ ಬಾಳೆ ಬೆಳೆ ಸೇರಿದಂತೆ ಬಿದಿರನ್ನು ರಕ್ಷಿಸುವ ವಿಧಾನದ ಬಗ್ಗೆ ಅಗತ್ಯ ತಾಂತ್ರಿಕ ಸಲಹೆ ನೀಡಲಾಯಿತು.