ಸಿದ್ದಾಪುರ, ಮೇ 16: ಎಸ್.ಎನ್.ಡಿ.ಪಿ. ಯೋಗಂ ಸ್ಥಾಪನೆಯಾಗಿ 117 ವರ್ಷವಾಗಿದ್ದು, ಈ ಹಿನ್ನೆಲೆ ಸ್ಥಾಪನೆಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಯೂನಿಯನ್ ವತಿಯಿಂದ ಸಿದ್ದಾಪುರದ ಕಚೇರಿಯಲ್ಲಿ 117 ದೀಪಗಳನ್ನು ಹಚ್ಚಲಾಯಿತು. ಈ ಸಂದರ್ಭ ಎಸ್.ಎನ್.ಡಿ.ಪಿ. ಜಿಲ್ಲಾ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್, ಕಾರ್ಯದರ್ಶಿ ಶಿವಪ್ರಸಾದ್, ಪ್ರಮುಖರಾದ ಕೆ.ಎಂ. ಮನೋಹರ್, ಗಿರೀಶ್ ಮಟ್ಟಂ, ಎಂ.ಎ. ಆನಂದ, ರಾಜನ್, ಕೆ.ಕೆ. ಮನೋಹರ್, ಕೆ.ಎಸ್. ಅನಿಲ್ ಕುಮಾರ್ ಇನ್ನಿತರರು ಹಾಜರಿದ್ದರು.