ಕೂಡಿಗೆ, ಮೇ 18: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿ ಕುಶಾಲನಗರದ ಕಸ ವಿಲೇವಾರಿ ಘಟಕವನ್ನು ಪ್ರಾರಂಭ ಕುಶಾಲನಗರದಿಂದ ತೆಗೆದುಕೊಂಡು ಬಂದ ಸಮರ್ಪಕವಾಗಿ ವಿಂಗಡಣೆ ಮಾಡದೆ ಮನಬಂದಂತೆ ಕಸವನ್ನು ರಾಶಿ ಹಾಕಿದ್ದಾರೆ. ಪರಿಣಾಮವಾಗಿ ದುರ್ವಾಸನೆ ಬಂದು ಸಮೀಪದ ಗ್ರಾಮಗಳ ಗ್ರಾಮಸ್ಥರು ರೋಗದಿಂದ ನರಳುವಂತಹ ಪ್ರಸಂಗಗಳು ಎದುರಾಗುತ್ತಿವೆ ಎಂದು ಸ್ಥಳೀಯರಾದ ಸಂಜೀವ, ರಾಜಣ್ಣ, ಕುಮಾರ್, ಗಿರಿಯಪ್ಪ, ಗಂಗಾಧರ ಆನಂದ, ಕೃಷ್ಣಶಿವರಾಮ, ಸಣ್ಣಸ್ವಾಮಿ ಸೇರಿದಂತೆ ಹಲವರು ತಮ್ಮ ಅಳಲನ್ನು ತೋಡಿಗೊಂಡಿದ್ದಾರೆ.
ಕಳೆದ 4 ತಿಂಗಳುಗಳಿಂದ ಕಸವನ್ನು ವಿಲೇವಾರಿ ಮಾಡದೆ ಒಂದೇ ಜಾಗದಲ್ಲಿ ಸುರಿದುದ್ದರಿಂದ ಅಲ್ಲಿನ ತಡೆಗೋಡೆ ಮೇಲಿಂದ ಪ್ಲಾಸ್ಟಿಕ್ ಸೇರಿದಂತೆ ಇತರ ಕಸಗಳು ಸಮೀಪದ ಜಮೀನಿನಲ್ಲಿ ಹಾರಾಡುತ್ತಿವೆ. ಈ ವ್ಯಾಪ್ತಿಯ ಒಂದು ಕಿಲೋ ಮೀಟರ್ ಸುತ್ತಲಿನ ಹಳ್ಳಿಗಳಿಗೆ ಕೆಟ್ಟ ವಾಸನೆ ಬರುತ್ತಿದೆ. ಇದರಿಂದಾಗಿ ಚಿಕ್ಕ ಮಕ್ಕಳು ಸೇರಿದಂತೆ ಅನೇಕ ಜನರು ಆಸ್ಪತ್ರೆಗೆ ಅಲೆದಾಡುವ ಪ್ರಸಂಗಗಳು ಎದುರಾಗಿವೆ ಎಂಬದು ಗಾಮಸ್ಥರು ಆರೋಪವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕಸ ವಿಲೇವಾರಿ ಘಟಕ ಸಮೀಪದ. ಗ್ರಾಮಸ್ಥರು ಇಂದು ಕೂಡಿಗೆ ಗ್ರಾಮ ಪಂಚಾಯಿತಿ ಭೇಟಿ ನೀಡಿ ಸಭೆ ನೆಡೆಯುವ ಸಂದರ್ಭದಲ್ಲಿ ಅಧ್ಯಕ್ಷರಿಗೆ, ಅಧಿಕಾರಿಗೆ ವ್ಯವಸ್ಥೆಯನ್ನು ಸರಿಪಡಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು, ಅಧಿಕಾರಿ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಪತ್ರವ್ಯವಹಾರ ನಡೆಸಿ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
-ಕೆ.ಕೆ ನಾಗರಾಜಶೆಟ್ಟಿ