ಕೂಡಿಗೆ, ಮೇ 18: ತಾಲೂಕಿನ ಎಲ್ಲಾ ಸಹಕಾರ ಸಂಘ, ರೈತ ಸಂಪರ್ಕ ಕೇಂದ್ರ ಸೇರಿದಂತೆ ವಿವಿಧ ಕೃಷಿ ಕ್ಷೇತ್ರದ ಅಂಗಡಿಗಳಲ್ಲಿ ಮುಸುಕಿನ ಜೋಳದ ವಿವಿಧ ತಳಿಯ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ ಇದರ ಸದುಪಯೋಗವನ್ನು ರೈತರು ಪೆಡೆದುಕೊಳ್ಳಬೇಕೇಂದು ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ಸಲಹೆ ನೀಡಿದ್ದಾರೆ. ರೈತರ ಜಮೀನಿನ ಮಣ್ಣಿನ ಅನುಗುಣವಾಗಿ, ಆಯಾ ರೈತರ ಆಯ್ಕೆ ಪ್ರಕಾರ ಹೈಬ್ರಿಡ್ ಕಂಪನಿಯ ವಿವಿಧ ತಳಿಯ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಮಾರಾಟಕ್ಕೆ ಇಡಲಾಗಿದೆ.ಇದರ ಜೊತೆಯಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಲಭ್ಯವಿರುವ ಬಿತ್ತನೆ ಬೀಜವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಗಂಗಾಕಾವೇರಿ 3614 ಕಾವೇರಿ ಸೀಡ್ಸ್ ಸೇರಿದಂತೆ ಹೈಬ್ರಿಡ್ ಕಂಪನಿಯ ಬಿತ್ತನೆ ಬೀಜಗಳನ್ನು ರೈತರಿಗೆ ಅನುಕೂಲವಾಗುವಂತೆ ಗುಡ್ಡೆಹೂಸೂರು ಕೂಡಿಗೆ, ತೂರೆನೂರು, ಹೆಬ್ಬಾಲೆ, ಶಿರಂಗಾಲ ಸೇರಿದಂತೆ ಶನಿವಾರಸಂತೆ ವ್ಯಾಪ್ತಿಯ ವಿವಿಧ ಸಹಕಾರ ಸಂಘಗಳಲ್ಲಿ ದಾಸ್ತಾನು ಇಡಲಾಗಿದೆ.

ಸಹಕಾರ ಸಂಘಗಳಲಿ ಸಾಮಾನ್ಯ ರೈತರಿಗೆ ಶೇ. 20 ಎಸ್‍ಸಿ, ಎಸ್‍ಟಿ ಅವರಿಗೆ ಶೇ. 30 ನೀಡಲಾಗುತ್ತಿದೆ. ಎಂದು ತಿಳಿಸಿದ್ದಾರೆ.