ಶ್ರೀಮಂಗಲ, ಮೇ 18 : ಪೆÇನ್ನಂಪೇಟೆಯ ಮಿಂಚ್ಗೊನೆ ವಿದ್ಯುತ್ ಸರಬರಾಜು ಕೇಂದ್ರದಿಂದ ಕಾನೂರು ಗ್ರಾ.ಪಂ ವ್ಯಾಪ್ತಿಗೆ ರೂ. 33 ಲಕ್ಷ ಅನುದಾನದಲ್ಲಿ ನೂತನ 11 ಕೆವಿ ತಡೆರಹಿತ ವಿದ್ಯುತ್ ಮಾರ್ಗ ಯೋಜನೆ ಮಂಜೂರಾಗಿ ಹಲವು ವರ್ಷಗಳಾದರೂ, ಕಾಮಗಾರಿಯನ್ನು ಕೈಗೆತ್ತಿಕೊಳ್ಳದೇ ಇರುವುದಕ್ಕೆ ಕಾನೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮಳೆಗಾಲಕ್ಕೆ ಮುನ್ನ ರಸ್ತೆ ಬದಿಯ ಮೂಲಕ ಅಳವಡಿಸುವ ಈ ಮಾರ್ಗವನ್ನು ಪೂರ್ಣ ಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಈಗ ಇರುವ ಮಾರ್ಗ ಪೆÇನ್ನಂಪೇಟೆಯಿಂದ ಬಾಳೆಲೆ ಮಾರ್ಗವಾಗಿ ಕಿರುಗೂರು, ನಲ್ಲೂರು, ಬೆಸಗೂರು, ಮಾರ್ಗವಾಗಿ ಕಾನೂರಿಗೆ ತಲುಪುತ್ತಿದ್ದು, ದಿನ ನಿತ್ಯ ಬಳಸು ಮಾರ್ಗದಿಂದ ವಿದ್ಯುತ್ ವ್ಯತ್ಯಯ ಏರ್ಪಡುತ್ತಿದೆ. ಈ ಹಳೆಯ ಮಾರ್ಗ ನಿರ್ಮಿಸುವ ವೇಳೆ 30 ಟ್ರಾನ್ಸ್‍ಫಾರ್ಮರ್‍ಗಳ ಸಾಮಾಥ್ರ್ಯವಿದ್ದು, ಇದೀಗ 300ರಿಂದ 350 ಟ್ರಾನ್ಸ್‍ಫಾರ್ಮರ್‍ಗಳೊಂದಿಗೆ ಹೆಚ್ಚಿನ ಲೋಡ್ ಹೊಂದಿದೆ. ಇದರಿಂದ ಆಗಿಂದಾಗ್ಗೆ ವಿದ್ಯುತ್ ವ್ಯತ್ಯಯ, ವೋಲ್ಟೇಜ್ ಸಮಸ್ಯೆ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಕಾನೂರು ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಚರ್ಚೆ ನಡೆಸಿ ಹೋರಾಟ ಸಮಿತಿ ರಚನೆ ಮಾಡಲು ನಿರ್ಧರಿಸುವುದಾಗಿ ಮಾಚಿಮಾಡ ರವೀಂದ್ರ ತಿಳಿಸಿದ್ದಾರೆ. ಈ ಸಂದರ್ಭ ಸುಳ್ಳಿಮಾಡ ಸುಬ್ಬಯ್ಯ, ಮಲ್ಲಮಾಡ ಪ್ರಭು ಪೂಣಚ್ಚ, ಅಳಮೇಂಗಡ ವಿವೇಕ್, ಸುಳ್ಳಿಮಾಡ ಗಾನ ಬೂತ್ ಸಮಿತಿ ಅಧ್ಯಕ್ಷ ಮಲ್ಲಮಾಡ ಈಶ್ವರ, ತಾಣಚ್ಚೀರ ಉಮೇಶ್, ಕೊಟ್ಟಂಗಡ ನಂದಾ, ಚೊಟ್ಟೆಕ್‍ಮಾಡ ಬಿದ್ದಪ್ಪ, ಕೇಚಮಾಡ ವಿಶ್ವ, ಮಾಣಿಯಪಂಡ ಕಿಶು, ಪೆÇರಂಗಡ ಗಗನ್, ತೀತಮಾಡ ಜಯ, ತಾಣಚ್ಚೀರ ದೀಪಕ್, ಮಲ್ಲಮಾಡ ಸುನೀಲ್, ಮಚ್ಚಮಾಡ ವಿನು, ಪೆÇೀರಂಗಡ ವಿಜು, ಎಸ್.ಎಂ. ಬಸಪ್ಪ, ಮಚ್ಚಮಾಡ ಧನು, ಕಿರಣ್ ಇದ್ದರು.