ಪೆರಾಜೆ, ಮೇ 16: ಕೊರೋನಾ ಲಾಕ್‍ಡೌನ್ ಸಂಪೂರ್ಣವಾಗಿ ಜನರನ್ನು ತಲ್ಲಣಗೊಳಿಸಿದೆ. ವ್ಯವಹಾರ, ಸಂಪರ್ಕ ನಷ್ಟಗಳು ಜನಜೀವನ ಮೇಲೂ ಪರಿಣಾಮ ಬೀರಿವೆ. ಇದರ ಮಧ್ಯೆ ನಮ್ಮ ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡರೂ ದೇಶ ಹಾಗೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಇನ್ನೊಂದು ಆತಂಕದ ಸಂಗತಿ. ಲಾಕ್‍ಡೌನ್‍ನಿಂದಾಗಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳ ಗಡಿಭಾಗದಲ್ಲಿ ತಡೆ ಒಡ್ಡಿರುವುದು ಕಂಡುಬಂದಿರುತ್ತವೆ. ಅಗತ್ಯ ವಿಷಯಕ್ಕೆ ಮಾತ್ರವೇ ದೂರದ ಊರು ಅಥವಾ ಸ್ವಂತ ಊರುಗಳನ್ನು ಸಂಪರ್ಕಿಸುವುದು ಖಡ್ಡಾಯವೆನಿಸಿಕೊಂಡಿದೆ. ಇದೀಗ ಜಾರಿಗೆ ಬಂದಿರುವ ಆದೇಶದಂತೆ ಜಿಲ್ಲಾ ಚೆಕ್ ಪೆÇೀಸ್ಟ್ ದಾಟಲು ‘ಒನ್ ಟೈಮ್ ಪಾಸ್’ ಅನ್ನು ಜಾರಿಗೊಳಿಸಲಾಗಿದೆ. ಇದರಿಂದ ಭಾರೀ ಸಮಸ್ಯೆಗೆ ಒಳಗಾಗಿರುವುದು ಕೊಡಗು ಜಿಲ್ಲೆಯ ಆಡಳಿತಕ್ಕೆ ಒಳಪಟ್ಟ ದ್ವೀಪದಲ್ಲಿ ವಾಸಮಾಡುತ್ತಿರುವ ಪೆರಾಜೆ ಗ್ರಾಮದ ಜನತೆ. ಮಡಿಕೇರಿ ತಾಲೂಕಿನ ಕಂದಾಯ ವ್ಯಾಪ್ತಿಯಲ್ಲಿ ಬರುವ ಪೆರಾಜೆ ಗ್ರಾಮವು ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿ (275)ಯಲ್ಲಿ ಮಡಿಕೇರಿಯಿಂದ ಕೊಡಗಿನ ಗಡಿ ಸಂಪಾಜೆಯನ್ನು ದಾಟಿ ಸುಮಾರು 16 ಕಿ.ಮೀ ದೂರ ಸಾಗಿದ ಮೇಲೆ ಸುಳ್ಯ ಪಟ್ಟಣಕ್ಕೆ 8 ಕಿ.ಮೀ ಇರುವಾಗ ಈ ಗ್ರಾಮ ಸಿಗುತ್ತದೆ. ಪೆರಾಜೆಗೆ ಬೇರೆ ಬೇರೆ ಗಡಿಯ ಸಂಪರ್ಕಗಳಿದ್ದು, ಇದೀಗ ಸಾಮಾನ್ಯ ಜನರಿಗೆ ವ್ಯವಹಾರ ದೃಷ್ಟಿಯಲ್ಲಿ ಬಹಳಾ ಕಷ್ಟವೆನಿಸಿದೆ. ಗ್ರಾಮದ ಸುತ್ತಲೂ ಭಾಗಶಃ ದಕ್ಷಿಣ ಕನ್ನಡ ಜಿಲ್ಲೆ, ಅದರೊಂದಿಗೆ ಕೇರಳ, ಮತ್ತು ನಮ್ಮ ಜಿಲ್ಲೆಯ ಭಾಗಮಂಡಲ, ಕರಿಕೆಯೊಂದಿಗೆ ಗ್ರಾಮದ ಗಡಿ ಹೊಂದಿದೆ. ಅದರಲ್ಲೂ ಪೆರಾಜೆ ಗ್ರಾಮದ ಸುತ್ತಲೂ ದಕ್ಷಿಣ ಕನ್ನಡ ಜಿಲ್ಲೆಯೇ ವ್ಯಾಪಿಸಿದ್ದು, ದ.ಕನ್ನಡಕ್ಕೆ ಹೋಗದೇ ಮಡಿಕೇರಿ, ಕೊಡಗನ್ನು ನೇರವಾಗಿ ತಲುಪಲು ಯಾವುದೇ ರಸ್ತೆ ಮಾರ್ಗಗಳಿಲ್ಲ. ಹಾಗಾಗಿ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ದೈನಂದಿನ ಬ್ಯಾಂಕ್, ಕೋರ್ಟ್, ಕಚೇರಿ, ವ್ಯವಹಾರ, ಉದ್ಯೋಗ ಇತರ ಕೆಲಸಗಳಿಗೆ ಹಿಂದಿನಿಂದಲೂ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಖೇನ ಪ್ರಯಾಣಿಸಬೇಕಿದೆ.
ಚೆಕ್‍ಪೋಸ್ಟ್‍ನಲ್ಲಿ ತಡೆ
ದ.ಕನ್ನಡ ಜಿಲ್ಲೆಯೂ ಕಲ್ಲುಗುಂಡಿಯಲ್ಲಿ ಚೆಕ್ ಪೆÇೀಸ್ಟ್ ಹಾಕಿ ಪೆರಾಜೆ ಗ್ರಾಮದ ಜನರಿಗೆ ಅಲ್ಲಿಯೂ ಅನಗತ್ಯ ಪ್ರಶ್ನೆಗಳನ್ನು ಕೇಳಿ ತಡೆ ಒಡ್ಡಲಾಗುತ್ತಿದೆ. ಪೆರಾಜೆ ಗ್ರಾಮಸ್ಥರೆಲ್ಲರೂ ವ್ಯವಹಾರಕ್ಕಾಗಿ ಮಡಿಕೇರಿಯನ್ನೇ
(ಮೊದಲ ಪುಟದಿಂದ) ಅವಲಂಬಿಸಿರುವ ಕಾರಣ ಈ ಒಂದು ನಿಷೇಧವನ್ನು ಸಡಿಲಗೊಳಿಸಿ ಪೆರಾಜೆ ಗ್ರಾಮದ ಗುರುತಿನ ಚೀಟಿಯನ್ನು ನೋಡಿ ನಮ್ಮನ್ನು ಕೊಡಗಿಗೆ ಹೋಗಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು, ಎಸ್‍ಪಿ, ಡಿವೈಎಸ್ಪಿಯವರು ಇದರ ಬಗ್ಗೆ ಕಿಂಚಿತ್ ಪರಿಶೀಲಿಸಿ ಕೊರೊನಾ ಸೋಂಕನ್ನು ತಡೆಗಟ್ಟು ವುದರೊಂದಿಗೆ ಈ ಸಮಸ್ಯೆಯನ್ನೂ ಸಮರ್ಪಕವಾಗಿ ಜಾರಿಗೊಳಿಸಿದರೆ ಗ್ರಾಮೀಣ ಜನರಿಗೆ ವ್ಯವಹಾರ ಸಂಪರ್ಕ ದೃಷ್ಟಿಯಲ್ಲಿ ಉಪಯುಕ್ತ ವಾಗುತ್ತದೆ ಎಂಬದು ಪೆರಾಜೆ ಗ್ರಾಮಸ್ಥರು ಅಳಲು.
-ಕಿರಣ್ ಕುಂಬಳಚೇರಿ