ಮಡಿಕೇರಿ, ಮೇ 16: ವೀರಾಜಪೇಟೆ ತಾಲೂಕಿನ ಚಿಕ್ಕಮಂಡೂರು, ನಡಿಕೇರಿ, ತೂಚಮಕೇರಿ, ಬಲ್ಯಮಂಡೂರು, ಕೋಣಗೇರಿ, ಬೆಳ್ಳೂರು, ಹರಿಹರ, ಬೆಕ್ಕೆಸೊಡ್ಲೂರು, ನಾಲ್ಕೇರಿ, ಕುಮಟೂರು, ತವಳಗೇರಿ ಮತ್ತು ಟಿ. ಶೆಟ್ಟಿಗೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿಯ ಚಲನವಲನವಿದ್ದು, ಹಲವಾರು ಜಾನುವಾರುಗಳ ಹತ್ಯೆಯಾಗಿರುವುದರಿಂದ, ಅರಣ್ಯ ಇಲಾಖೆಯು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿರುತ್ತದೆ. ಆದ್ದರಿಂದ, ಸದರಿ ಗ್ರಾಮಗಳ ವ್ಯಾಪ್ತಿಯ ಸಾರ್ವಜನಿಕರು ತಮ್ಮ ತಮ್ಮ ಜಾನುವಾರುಗಳನ್ನು ರಾತ್ರಿ ವೇಳೆಯಲ್ಲಿ ಭದ್ರವಾದ ಕೊಟ್ಟಿಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಕಟ್ಟಿಕೊಳ್ಳಲು ಮತ್ತು ಯಾರಿಗಾದರೂ ತಮ್ಮ ಜಮೀನುಗಳಲ್ಲಿ ಅಥವಾ ಇತರ ಸ್ಥಳಗಳಲ್ಲಿ ಹುಲಿಯು ಪ್ರತ್ಯಕ್ಷವಾಗಿ ಅಥವಾ ಅದರ ತಾಜಾ ಹೆಜ್ಜೆ ಗುರುತುಗಳು ಕಂಡುಬಂದಲ್ಲಿ ಅರಣ್ಯ ಇಲಾಖೆಗೆ ಕೂಡಲೇ ಮಾಹಿತಿ ನೀಡಬೇಕಾಗಿ ಕರ್ನಾಟಕ ಅರಣ್ಯ ಇಲಾಖೆಯ ವೀರಾಜಪೇಟೆ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.

ಸಂಪರ್ಕಿಸಬಹುದಾದ ಸಂಖ್ಯೆಗಳು: ಕೆ.ಎನ್. ರವಿಕಿರಣ, ಉಪ ವಲಯ ಅರಣ್ಯ ಅಧಿಕಾರಿ: 8904388601, ಗಣೇಶ್ ಶೇಟ್, ಉಪ ವಲಯ ಅರಣ್ಯ ಅಧಿಕಾರಿ: 9632348160, ಕೆ.ಜಿ. ದಿವಾಕರ, ಉಪ ವಲಯ ಅರಣ್ಯ ಅಧಿಕಾರಿ: 7349090619.