ಸೋಮವಾರಪೇಟೆ,ಮೇ 15: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಮೀಪದ ನಗರೂರು ಗ್ರಾಮದ ಪ್ರಿನ್ಸಿಣಿ ಅವರಿಗೆ ಜಾನಪದ ಪರಿಷತ್ ವತಿಯಿಂದ ಬೇಬಿ ಕಿಟ್ ವಿತರಿಸಲಾಯಿತು.
ಲಾಕ್‍ಡೌನ್‍ನಿಂದಾಗಿ ಕುಟುಂಬ ಸಂಕಷ್ಟದಲ್ಲಿರುವ ನಡುವೆಯೇ ಪ್ರಿನ್ಸಿಣಿ-ರಾಬರ್ಟ್ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಮಗುವಿನ ಆರೈಕೆಗಾಗಿ ಸೋಮವಾರಪೇಟೆ ಹೋಬಳಿ ಜಾನಪದ ಪರಿಷತ್‍ನ ನಿರ್ದೇಶಕ, ನಗರೂರಿನ ಕೆ.ಎ. ಪ್ರಕಾಶ್ ಅವರು, ಮಗುವಿನ ತಾಯಿಗೆ ಬೇಬಿ ಕಿಟ್ ವಿತರಿಸಿದರು.
ಈ ಸಂದರ್ಭ ಜಾನಪದ ಪರಿಷತ್‍ನ ಹೋಬಳಿ ಕಾರ್ಯದರ್ಶಿ ಎಂ.ಎ. ರುಬೀನಾ, ನಿರ್ದೇಶಕಿ ವಸಂತಿ, ತಾಲೂಕು ಕಾರ್ಯದರ್ಶಿ ವಿಜಯ್ ಹಾನಗಲ್ ಅವರುಗಳು ಹಾಜರಿದ್ದರು.