ಮಡಿಕೇರಿ, ಮೇ 15: ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊಡಗು ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್ ವತಿಯಿಂದ ಸ್ಯಾನಿಟೈಸರ್ ಹಾಗೂ ಮಾಸ್ಕ್ ಅನ್ನು ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರ ಮೂಲಕ ನೀಡಲಾಯಿತು. ಸಂಸ್ಥೆಯ ವಲಯ ವ್ಯವಸ್ಥಾಪಕ ಕೆ.ಪಿ. ಸಂದೇಶ್, ಶಾಖಾ ವ್ಯವಸ್ಥಾಪಕ ವಿರೂಪಾಕ್ಷ, ಸಿಬ್ಬಂದಿ ವರ್ಗದವರು ಇದ್ದರು.