ಮಡಿಕೇರಿ, ಮೇ 15: ಒಂದೊಮ್ಮೆ ಭೂಗತ ಲೋಕದಲ್ಲಿ ಭಾರೀ ಸದ್ದು ಮಾಡಿ ನಂತರದ ವರ್ಷಗಳಲ್ಲಿ ಈ ಚಟುವಟಿಕೆಯಿಂದ ತಟಸ್ಥಗೊಂಡು ಜಯಕರ್ನಾಟಕ ಎಂಬ ಸಂಘಟನೆಯನ್ನು ಸಂಸ್ಥಾಪಿಸಿದ್ದ, ಇದರ ಅಧ್ಯಕ್ಷ ಮುತ್ತಪ್ಪ ರೈ ದೇರ್ಲ ಅವರು ತಾ. 15ರ ಬೆಳಗ್ಗಿನ ಜಾವ ಸಾವಿಗೀಡಾಗಿದ್ದಾರೆ. 4ಖ ಗ್ರೂಪ್ಸ್ ಸಮೂಹ ಸಂಸ್ಥೆಯ ಮುಖ್ಯಸ್ಥರಾಗಿದ್ದ ಮುತ್ತಪ್ಪ ರೈ, ಹಲವು ಸಮಯಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ತಾ. 15ರ ಬೆಳಿಗ್ಗೆ 2 ಗಂಟೆ ವೇಳೆಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದರು.
ಕೊಡಗಿನ ಯುವತಿ, ಮಡಿಕೇರಿಯ ರೇಖಾ ಅವರನ್ನು ವಿವಾಹವಾಗಿದ್ದ ಮುತ್ತಪ್ಪ ರೈ ಕೆಲಕಾಲ ಮಡಿಕೇರಿಯ ರಾಣಿಪೇಟೆಯಲ್ಲೂ ನೆಲೆಸಿದ್ದರು. ಇದರಿಂದ ಅವರಿಗೆ ಕೊಡಗಿನ ನಂಟೂ ಸಾಕಷ್ಟಿದ್ದು, ಜಿಲ್ಲೆಯಲ್ಲಿಯೂ ಹಲವಾರು ಸ್ನೇಹಿತರಿದ್ದರು. ರೇಖಾ ಕೆಲವರ್ಷಗಳ ಹಿಂದೆ ನಿಧನರಾಗಿದ್ದರು. ಇವರು ಪ್ರಾರಂಭಿಸಿದ ಜಯ ಕರ್ನಾಟಕ ಸಂಘಟನೆಯ ಶಾಖೆಯೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಲವರು ಇದರಲ್ಲಿ ತೊಡಗಿಸಿಕೊಂಡಿದ್ದರು.
ಮುತ್ತಪ್ಪ ರೈ ನಿಧನ ನಾಪೆÇೀಕ್ಲು ಸಂಘಟನೆ ಕಂಬನಿ
ನಾಪೆÇೀಕ್ಲು : ಮುತ್ತಪ್ಪ ರೈಯವರ ನಿಧನಕ್ಕೆ ಮಡಿಕೇರಿ ತಾಲೂಕು ಜಯಕರ್ನಾಟಕ ಸಂಘಟನೆಯು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ. ನಾಪೆÇೀಕ್ಲುವಿನ ಸಂಘದ ಕಚೇರಿಯಲ್ಲಿ ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ಮುತ್ತಪ್ಪ ರೈಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ಪ್ರಮುಖರದ ಎಂ.ಇ. ಅಬ್ದುಲ್ ರಜಾಕ್, ಕೆಟೋಳಿರ ರಮ್ಮಿ, ಜಾಕ್ರೀಯ, ಎಂ.ಸಿ. ನಾಗರಾಜ್, ಮತ್ತಿತರರು ಇದ್ದರು.
ಸಂತಾಪ
ಸೋಮವಾರಪೇಟೆ: ಜಯಕರ್ನಾಟಕ ಸಂಘಟನೆಯ ಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ನಿಧನಕ್ಕೆ ಜಯಕರ್ನಾಟಕ ಸಂಘಟನೆಯ ತಾಲೂಕು ಘಟಕದÀ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಟ್ಟಣದ ಸಿ.ಕೆ.ಸುಬ್ಬಯ್ಯ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಮುತ್ತಪ್ಪ ರೈ ಭಾವಚಿತ್ರಕ್ಕೆ ಅಧ್ಯಕ್ಷ ಸುರೇಶ್‍ಶೆಟ್ಟಿ ಪುಷ್ಪನಮನ ಸಲ್ಲಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಬಿ.ಟಿ.ರವಿ, ಅಜಿತ್ ಮತ್ತಿತರರು ಉಪಸ್ಥಿತರಿದ್ದರು.
ಕುಶಾಲನಗರ: ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರ ನಿಧನಕ್ಕೆ ಸಂಘಟನೆಯ ಕೊಡಗು ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಎನ್.ಮುರಳೀಧರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಮತ್ತು ಕೊಪ್ಪ ವ್ಯಾಪ್ತಿಯಲ್ಲಿ ಸಂಘಟನೆಯ ಪ್ರಮುಖರು, ಸದಸ್ಯರು ಮೌನಚಾರಣೆ ನಡೆಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.