ಗೋಣಿಕೊಪ್ಪಲು, ಮೇ 15: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ಪರಿಹಾರವನ್ನು ನೀಡಲಾಯಿತು.

ಮಡಿಕೇರಿಯ ಜಿಲ್ಲಾಡಳಿತದ ಕಚೇರಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ತೆರಳಿದ ರೈತ ಮುಖಂಡರು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದರು.

ದೇಶದೆಲ್ಲೆಡೆ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಆದ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯವಾಗಲೂ ರೈತ ಸಂಘ ಕೆಲವು ದಾನಿಗಳ ಹಾಗೂ ರೈತ ಮುಖಂಡ ರಿಂದ ಸಂಗ್ರಹಿಸಿದ್ದ 70 ಸಾವಿರ ಹಣ ಹಾಗೂ ಅರಣ್ಯ ದಂಚಿನಲ್ಲಿ ಸಿಲುಕಿ ತೊಂದರೆ ಯಲ್ಲಿರುವ ರೈತರಿಗೆ ನೀಡಲು ಅರಣ್ಯ ಇಲಾಖೆಯ ಸಿಸಿಎಫ್ ನೀಡಿದ 30 ಸಾವಿರ ಹಣವನ್ನು ಸಂಗ್ರಹಿಸಿ ಒಟ್ಟು 1 ಲಕ್ಷ ಹಣವನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಮನು ಸೋಮಯ್ಯ ತಿಳಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ರೈತ ಮುಖಂಡರಾದ ವಕೀಲ ಹೇಮಚಂದ್ರ, ಅಪ್ಪಚಂಗಡ ಮೋಟಯ್ಯ, ಮಂಡೆಪಂಡ ಪ್ರವೀಣ್, ಪೆÇನ್ನಪ್ಪ, ಚೊಟ್ಟೆಯಂಡಮಾಡ ಮನು, ಚಟ್ಟಂಗಡ ಕಂಬ ಕಾರ್ಯಪ್ಪ ಸೇರಿದಂತೆ ಇನ್ನಿತರು ಹಾಜರಿದ್ದರು.

-ಹೆಚ್.ಕೆ.ಜಗದೀಶ್