ಕೊಡ್ಲಿಪೇಟೆ,ಮೇ 15: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಎನ್ಎಸ್ಯುಐನ ಕೊಡಗು ಕಾಂಗ್ರೆಸ್ ವಿದ್ಯಾರ್ಥಿ ಘಟಕದ ವತಿಯಿಂದ ಕೊಡ್ಲಿಪೇಟೆಯ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಶಿಬಿರವನ್ನು ಐಎನ್ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯ ವತಿಯಿಂದ ರಕ್ತದಾನ ಕಾರ್ಯಕ್ರಮ ಆಯೋಜಿಸಿರುವದು ಶ್ಲಾಘನೀಯ. ರಕ್ತದಾನ ಶ್ರೇಷ್ಠದಾನವಾಗಿದ್ದು, ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡಬೇಕು ಎಂದರು. ಕಾಂಗ್ರೆಸ್ ಮುಖಂಡರಾದ ಡಾ. ಉದಯ್ಕುಮಾರ್, ಗ್ರಾ.ಪಂ. ಮಾಜೀ ಅಧ್ಯಕ್ಷ ಔರಂಗಜೇಬ್ ಅವರುಗಳು ಮಾತನಾಡಿದರು.
ಈ ಸಂದರ್ಭ ಎನ್ಎಸ್ಯುಐ ಜಿಲ್ಲಾಧ್ಯಕ್ಷ ತ್ರಿಣೇಶ್, ಉಪಾಧ್ಯಕ್ಷ ಹ್ಯಾರಿಸ್, ಕಾಂಗ್ರೆಸ್ ಮುಖಂಡ ಬ್ಯಾಡಗೊಟ್ಟ ಹನೀಫ್, ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳಾದ ಸಂಜಯ್, ಅರುಣ್, ಅಭಿ, ನರೇಂದ್ರ, ರಾಯಿಸ್, ಪೂರ್ಣೇಶ್, ಅಮಾನ್, ಮುಸ್ತಫ, ಫಾರೂಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.