ಶನಿವಾರಸಂತೆ, ಮೇ 12: ಶನಿವಾರಸಂತೆ, ಕೊಡ್ಲಿಪೇಟೆಯ ಗಡಿ ಭಾಗವಾದ ನಿಲುವಾಗಿಲು, ಹಿಪ್ಲಿ, ಶಾಂತಪುರ 3 ಚೆಕ್ ಪೋಸ್ಟ್‍ಗಳಿಗೆ ಸೋಮವಾರ ಸಂಜೆ ಕೊಡಗಿನ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್ ದಿಢೀರಾಗಿ ಭೇಟಿ ನೀಡಿ ಪರಿಶೀಲಿಸಿದರು.
ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆಯಿಂದಿರುವಂತೆ ಮಾಸ್ಕ್ ಧರಿಸಿಕೊಂಡು ಅಂತರವನ್ನು ಕಾಯ್ದುಕೊಳ್ಳಿ, ಹೊರ ರಾಜ್ಯ, ಜಿಲ್ಲೆಯಿಂದ ಬಂದವರನ್ನು ತಪಾಸಣೆ ಮಾಡಿ ವಾಪಾಸು ಕಳುಹಿಸಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಕೃಷ್ಣನಾಯಕ್, ಸಿಬ್ಬಂದಿಗಳಾದ ಜಯಕುಮಾರ್, ವಿನಯ, ವಿವೇಕ್, ಮಹಿಳಾ ಸಿಬ್ಬಂದಿ ರಾಧ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು ಹಾಜರಿದ್ದರು.