ಕೂಡಿಗೆ, ಮೇ 12: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಕೃಷಿ ಪತ್ತಿನ ಸಂಘದ. ಮಾಸಿಕ ಸಭೆಯು ಸಂಘದ ಅಧ್ಯಕ್ಷರಾದ ಕೆ.ಕೆ. ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು. ರೈತರಿಗೆ ಬಡ್ಡಿಯಲ್ಲಿ ರಿಯಾಯಿತಿ ನೀಡುವ ತೀರ್ಮಾನವನ್ನು ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರು ತೀರ್ಮಾನ ಕೈಗೊಂಡರು.
ಆರ್ಥಿಕ ಸಂಕಷ್ಟದಿಂದ ಸಣ್ಣ ಉದ್ಯಮಿಗಳು, ಬೀದಿ ವ್ಯಾಪಾರಿಗಳು ಸೇರಿದಂತೆ ವಿವಿಧ ಕೃಷಿಯೇತರ ಸಾಲಗಳಿಗೆ ಶೇ. 2 ರಿಂದ ಶೇಕಡ 4ವರೆಗೆ ಒಂದು ವರ್ಷದವರೆಗೆ ಬಡ್ಡಿ ದರವನ್ನು ಸಂಘದ ಗ್ರಾಹಕರಿಗೆ ಕಡಿಮೆ ಮಾಡಲಾಗುವುದು ಎಂದು ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಪಿ. ಹಮೀದ್, ನಿರ್ದೇಶಕರು ಗಳಾದ. ಎಸ್.ಎನ್. ರಾಜಾರಾವ್, ಲಕ್ಷ್ಮಣರಾಜ ಅರಸ್, ವಿಶ್ವನಾಥ, ತಮ್ಮಣ್ಣೇಗೌಡ, ಪಾರ್ವತಮ್ಮ ರಾಮೇಗೌಡ, ರಮೇಶ್ ಕೆ.ಟಿ., ಅರುಣ್ಕುಮಾರ್, ಕೃಷ್ಣೇಗೌಡ ಸೇರಿದಂತೆ ಸಂಘದ ಕಾರ್ಯದರ್ಶಿ ಎಂ.ಪಿ. ಮೀನಾ ಇದ್ದರು.