ಮಡಿಕೇರಿ, ಮೇ 12: ಕೊಡಗು ಬ್ಲಡ್ ಡೋನರ್ಸ್ ತಂಡವು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದಾದಿಯರ ಕೈಯಿಂದ ಕೇಕ್ ಕತ್ತರಿಸಿ, ಅವರಿಗೆಲ್ಲ ಸಿಹಿ ಹಂಚಿ, ಕೊರೊನಾ ವೈರಾಣುವಿನಿಂದ ರಕ್ಷಿಸಿಕೊಳ್ಳಲು ಸಾಮಾಜಿಕ ಅಂಗವಾಗಿ ಮಾರ್ಪಾಟಾಗಿರುವ ಹಾಗೂ ಈ ಕಾಲಮಾನದ ಅನಿವಾರ್ಯವೂ ಆಗಿರುವ ಮಾಸ್ಕ್‍ಗಳನ್ನು ಉಚಿತವಾಗಿ ಹಂಚುವ ಮೂಲಕ ಅರ್ಥಪೂರ್ಣವಾಗಿ ವಿಶ್ವ ದಾದಿಯರ ದಿನವನ್ನು ಆಚರಿಸಿತು.

ಈ ಸಂದರ್ಭದಲ್ಲಿ ಕೊಡಗು ಬ್ಲಡ್ ಡೋನರ್ಸ್ ತಂಡದ ಅಧ್ಯಕ್ಷ ವಿನ್ಸೆಂಟ್, ಸಂಘಟನಾ ಕಾರ್ಯದರ್ಶಿ ಸಮೀರ್, ನಿರ್ದೇಶಕ ಮನ್ಸೂರ್ ಅಲಿ, ಇತರ ಸದಸ್ಯರು ಹಾಜರಿದ್ದರು. -ರಂಜಿತ್ ಕವಲಪಾರ