ಪೊನ್ನಂಪೇಟೆ, ಮೇ 12: ನಾಪೋಕ್ಲು ಸಮೀಪ ಬಲ್ಲಮಾವಟಿ ಎಂಬ ಗ್ರಾಮದ ಚಾರಿಮಂಡ ಜಮುನಾ ಎಂಬವರ ಮನೆಯ ಸಮೀಪ ತೋಟದಲ್ಲಿ ಸೇರಿಕೊಂಡಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಗೋಣಿಕೊಪ್ಪಲಿನ ಉರಗ ಪ್ರೇಮಿ ಸ್ನೇಕ್ ಶರತ್‍ಕಾಂತ್ ಸುರಕ್ಷಿತವಾಗಿ ಸೆರೆ ಹಿಡಿದು ಮಾಕುಟ್ಟ ರಕ್ಷಿತಾರಣ್ಯಕ್ಕೆ ಬಿಟ್ಟರು. ಸಮೀಪದ ಕಾಡಿನಿಂದ ತೋಟಕ್ಕೆ ನುಗ್ಗಿ ಆಹಾರಕ್ಕಾಗಿ ಕೇರೆ ಹಾವನ್ನು ಅಟ್ಟಾಡಿಸಿಕೊಂಡು ಬಂದು ಮನೆಯ ಹಿಂಭಾಗ ಇದ್ದ ಸಣ್ಣ ಮಾವಿನ ಮರಕ್ಕೆ ಹತ್ತಿಕೊಂಡಿದ್ದ ಕಾಳಿಂಗನನ್ನು ಸೆರೆ ಹಿಡಿಯಲಾಯಿತು. ಇದು ಶರತ್ ಕಾಂತ್ ಸುರಕ್ಷಿತವಾಗಿ ಹಿಡಿದಿರುವ 21ನೇ ಕಾಳಿಂಗ ಸರ್ಪವಾಗಿದೆ. ಈ ಸಂದರ್ಭ ಗೋಣಿಕೊಪ್ಪಲಿನ ಮತ್ತೊಬ್ಬ ಉರಗ ಪ್ರೇಮಿ ಸ್ನೇಕ್ ಭಾವೆ ಜೊತೆಗಿದ್ದರು.