ನಾಪೆÇೀಕ್ಲು, ಮೇ 12: ನಾಪೆÇೀಕ್ಲು ವ್ಯಾಪ್ತಿಯ ಬಹಳಷ್ಟು ಜನ ಮಡಿಕೇರಿಯಲ್ಲಿ ಸರಕಾರಿ ಮತ್ತು ಖಾಸಗಿ ಉದ್ಯೋಗದಲ್ಲಿದ್ದಾರೆ. ಬಸ್‍ಗಳು ಇಲ್ಲದ ಕಾರಣ ಎಲ್ಲರೂ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದುದರಿಂದ ಬೆಳಿಗ್ಗೆ ಭಾಗಮಂಡಲ ದಿಂದ ನಾಪೆÇೀಕ್ಲು ಮೂಲಕ ಮಡಿಕೇರಿಗೆ ಹಾಗೂ ಸಂಜೆ ಮಡಿಕೇರಿಯಿಂದ ನಾಪೆÇೀಕ್ಲು ಮೂಲಕ ಭಾಗಮಂಡಲಕ್ಕೆ ಸರಕಾರಿ ಬಸ್ ಓಡಿಸುವ ಮೂಲಕ ನೌಕರರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಈ ವ್ಯಾಪ್ತಿಯ ಜನ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.