ಕುಶಾಲನಗರ, ಮೇ 12: ಕುಶಾಲನಗರ ವ್ಯಾಪ್ತಿಯ 30 ಅರ್ಚಕರಿಗೆ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಆಹಾರ ಕಿಟ್ ವಿತರಿಸಲಾಯಿತು.

ಮಾಧ್ಯಮ ಸ್ಪಂದನ ಕೋರಿಕೆ ಮೇಲೆ ಅರ್ಚಕರಿಗೆ ಕಿಟ್ ವಿತರಿಸಲಾಯಿತು. ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಸಭಾಂಗಣದಲ್ಲಿ ಸ್ವಾಮೀಜಿ ಬೋಧಸ್ವರೂಪಾನಂದ ಮಹಾರಾಜ್ ಕಿಟ್ ವಿತರಿಸಿದರು. ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯೇಂದ್ರ, ಉಪಾಧ್ಯಕ್ಷ ಸುಬ್ರಾಯ, ಖಜಾಂಚಿ ರಾಜಶೇಖರ್, ಕಾರ್ಯದರ್ಶಿ ಅನಿಲ್, ಪಟ್ಟಣ ಪಂಚಾಯಿತಿ ಸದಸ್ಯ ನಾರಾಯಣ, ಮಾಧ್ಯಮ ಸ್ಪಂದನ ತಂಡದ ಪ್ರಭುದೇವ್ ಇದ್ದರು.