ಪೆÇನ್ನಂಪೇಟೆ, ಮೇ 12: ಗೋಣಿಕೊಪ್ಪ ಸಮೀಪದ ಮೈಸೂರಮ್ಮ ನಗರದಲ್ಲಿ ಗ್ಯಾಂಗ್ರಿನ್ ಕಾಯಿಲೆಯಿಂದ ಬಳಲುತ್ತಿದ್ದ ಅಪ್ಪುಕುಟ್ಟನ್ ಎಂಬವರು ಔಷಧಿಕೊಳ್ಳಲು ಹಣವಿಲ್ಲದೆ ತೊಂದರೆಗೊಳಗಾಗಿದ್ದನ್ನು ಮನಗಂಡು ಅವರಿಗೆ ಒಂದು ತಿಂಗಳಿಗೆ ಆಗುವಷ್ಟು ಔಷಧಿಯನ್ನು ಗೋಣಿಕೊಪ್ಪ ಸ್ವಯಂ ಪ್ರೇರಣಾ ಬಳಗ ವಿತರಿಸಿದೆ.

ಪೆÇನ್ನಂಪೇಟೆ ತೊರೆಬೀದಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸರಿತ ಎಂಬವರು ತೊಂದರೆಯಲ್ಲಿರುವ ಬಗ್ಗೆ ಮಾಹಿತಿ ಪಡೆದು ಅವರಿಗೆ ಒಂದು ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ನೀಡಿದ್ದಾರೆ.

ಸ್ವಯಂ ಪ್ರೇರಣಾ ಬಳಗದ ಅಧ್ಯಕ್ಷೆ ಕೊಣಿಯಂಡ ಕಾವ್ಯಸಂಜು ಮುಂದಾಳತ್ವದಲ್ಲಿ, ಉಪಾಧ್ಯಕ್ಷೆ ಚಿರಿಯಪ್ಪಂಡ ಲತಾ ಪೂಣಚ್ಚ, ಕಾರ್ಯದರ್ಶಿ ಮೋಕರ್ಂಡ ಮೀನಾ ಗಣಪತಿ ಹಾಗೂ ಸದಸ್ಯರ ತಂಡ ಕೆಲವು ದಿನಗಳ ಹಿಂದೆ ಪೌರಕಾರ್ಮಿಕರು, ಸಂಕಷ್ಟಕ್ಕೊಳಗಾಗಿದ್ದ ಗೋಣಿಕೊಪ್ಪಲಿನ ಛಾಯಾ ಗ್ರಾಹಕರು, ಆಟೋ ಚಾಲಕರಿಗೂ ನೆರವು ನೀಡಿತ್ತು.