ಮಡಿಕೇರಿ, ಮೇ 11 : ಮಾದಾಪುರ ಬಳಿಯ ಜಂಬೂರುವಿ ನಲ್ಲಿ ರಾಜೀವ್‍ಗಾಂಧಿ ಗೃಹ ನಿರ್ಮಾಣ ನಿಗಮದಿಂದ ಸಂತ್ರಸ್ತರಿ ಗಾಗಿ ರೂಪುಗೊಂಡಿರುವ ಮನೆಗಳ ಕೆಲಸ ನಿರತ 25 ಮಂದಿ ಕಾರ್ಮಿಕರು ತಮ್ಮ ಹುಟ್ಟೂರು ಬಿಹಾರ, ಅಸ್ಸಾಂ, ಉತ್ತರಪ್ರದೇಶದತ್ತ ಇಂದು ಹೊರಟಿದ್ದು ಕಂಡುಬಂತು.7ನೇ ಹೊಸಕೋಟೆ ಮೂಲಕ ಹೊರಟಿದ್ದ ಈ ಕಾರ್ಮಿಕರಿಗೆ ತಡೆ ಹಾಕಿರುವ ಸುಂಟಿಕೊಪ್ಪ ಪೊಲೀಸರು, ಯಾವುದೇ ಪಾಸ್ ರಹಿತ ಪ್ರಯಾಣಿಸಲು ಸಾಧ್ಯವಿಲ್ಲವೆಂದು ಮನವರಿಗೆ ಮಾಡಿಕೊಟ್ಟರು. ಬಳಿಕ ಜಿಲ್ಲಾಡಳಿತದ ನಿರ್ದೇಶನದಂತೆ ಅಲ್ಲಿ ಸರಕಾರಿ ಶಾಲೆಯಲ್ಲಿ ಊಟ ಹಾಗೂ ವಸತಿ ಕಲ್ಪಿಸಿದರು.ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಬಿ. ತಿಮ್ಮಪ್ಪ ನೇತೃತ್ವದಲ್ಲಿ ಸಂಬಂಧಿಸಿದ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಸಿ ಅಗತ್ಯ ವ್ಯವಸ್ಥೆಗೆ ಸೂಚಿಸಿ, ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಸೇವಾಸಿಂಧು ಮೂಲಕ ಪಾಸ್ ಕೊಡಿಸಿ ಈ ಕಾರ್ಮಿಕರನ್ನು ತಮ್ಮ ತವರಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ಲಭಿಸಿದೆ. ಈ ಸಂದರ್ಭ ಕಂದಾಯ ಪರಿವೀಕ್ಷಕ ಶಿವಪ್ಪ, 7ನೇ ಹೊಸಕೋಟೆ ಗ್ರಾ.ಪಂ. ಉಪಾಧ್ಯಕ್ಷ ಮುಸ್ತಾಫ, ಪಿಡಿಓ ರವೀಶ್, (ಮೊದಲ ಪುಟದಿಂದ) ಮಾದಾಪುರ ಪಿಡಿಓ ಪೂರ್ಣಕುಮಾರ್, ಸುಂಟಿಕೊಪ್ಪ ಠಾಣಾಧಿಕಾರಿ ಬಿ.ತಿಮ್ಮಪ್ಪ, ಎಎಸ್‍ಐ ಕಾವೇರಪ್ಪ, ಖಾದರ್, ಮತ್ತಿತರರು ಇದ್ದರು.
ಪ್ರತಿ ಕಿ.ಮೀ.ಗೆ ರೂ. 1.60
ಕೊಡಗು ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ರಾಜ್ಯಕ್ಕೆ ಹಿಂತಿರುಗಲು ಬಯಸುವ ವಲಸೆ ಕಾರ್ಮಿಕರ ಗಮನಕ್ಕಾಗಿ ಈ ಕೆಳಕಂಡ ಆದೇಶ ಹೊರಬಿದ್ದಿದೆ.
ಸೇವಾಸಿಂಧು ಇ ಪಾಸ್ ಇಲ್ಲದಿದ್ದರೆ ಅದನ್ನು ಸೇವಾಸಿಂಧು ಪೆÇೀರ್ಟಲ್ ಮೂಲಕ ಪಡೆದು ಹತ್ತಿರದ ಪಂಚಾಯಿತಿಗಳಿಗೆ ವರದಿ ಮಾಡಬೇಕು. ಸೇವಾಸಿಂಧು ಪಾಸ್ ಪಡೆದ ನಂತರ, ತಮ್ಮ ಹೆಸರುಗಳನ್ನು ಪಂಚಾಯಿತಿಯಲ್ಲಿ ನೋಂದಾಯಿಸಿ ಅಥವಾ 1077ಗೆ ಕರೆ ಮಾಡಬೇಕು. ಮೇಲಿನ ರಾಜ್ಯಗಳಲ್ಲಿ ಒಂದೇ ದಿನದಲ್ಲಿ ಒಂದೇ ಸ್ಥಳಕ್ಕೆ ಹೋಗುವ ಕನಿಷ್ಟ 25 ಜನರು ಇದ್ದಲ್ಲಿ ಮಾತ್ರ ಜಿಲ್ಲಾಡಳಿತದಿಂದ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ವ್ಯವಸ್ಥೆಗೊಳಿಸಲಾಗುವುದು.
ಒಂದು ಬಾರಿಗೆ ಒಂದು ಬಸ್‍ನಲ್ಲಿ ಕೇವಲ 25 ರಿಂದ 30 ಜನರಿಗೆ ಮಾತ್ರ ಅವಕಾಶವಿರುತ್ತದೆ. ಕೆ.ಎಸ್.ಆರ್.ಟಿ.ಸಿ. ಬಸ್ ದರ ಪ್ರತಿ ಪ್ರಯಾಣಿಕರಿಗೆ ಪ್ರತಿ ಕಿ.ಮೀ.ಗೆ ಅಂದಾಜು ರೂ. 1.60 ಆಗಿರುತ್ತದೆ. ಇದರೊಂದಿಗೆ ಕೆ.ಎಸ್.ಆರ್.ಟಿ.ಸಿ. ಸಾರಿಗೆ ಸಂಸ್ಥೆಯ ಇತರ ನಿಯಮಗಳು ಅನ್ವಯಿಸುತ್ತದೆ. ಕಾರ್ಮಿಕರಿಗೆ ಮುಖಗವಸು ಮತ್ತು ಹ್ಯಾಂಡ್ ಸ್ಯಾನಿಟೈಸರ್‍ಗಳನ್ನು ಒದಗಿಸಲು ಮತ್ತು ವೈದ್ಯಕೀಯ ತಪಾಸಣೆಗಾಗಿ ಆರೋಗ್ಯ ಇಲಾಖೆಗೆ ಅನುಕೂಲವಾಗುವಂತೆ ಕಾರ್ಮಿಕ ಇಲಾಖೆಗೆ ನಿರ್ದೇಶಿಸಲಾಗಿದೆ.
ತಾಲೂಕು ಪಂಚಾಯಿತಿಗಳ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಉಪ ವಿಭಾಗಾಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು ಮತ್ತು ಉಪವಿಭಾಗಾಧಿಕಾರಿಗಳು ಕೆ.ಎಸ್.ಆರ್.ಟಿ.ಸಿ. ಡಿಪೆÇೀ ವ್ಯವಸ್ಥಾಪಕರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಲಿದ್ದಾರೆ.
ಪ್ರಸ್ತುತ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ಮುಂತಾದ ರಾಜ್ಯಗಳಿಗೆ ಮರಳಲು ಬಯಸುವ ವಲಸೆ ಕಾರ್ಮಿಕರಿಗೆ ಮಾತ್ರ ಇದು ಅನ್ವಯವಾಗಲಿದ್ದು, ಇತರ ರಾಜ್ಯಗಳ ವಲಸೆ ಕಾರ್ಮಿಕರಿಗೆ ಸ್ವ-ಸ್ಥಳಕ್ಕೆ ಹಿಂತಿರುಗುವ ಸಂಬಂಧ ಸದರಿ ರಾಜ್ಯಗಳೊಂದಿಗೆ ಚರ್ಚಿಸಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಪಾವತಿ ಆಧಾರದಲ್ಲಿ ಸೌಲಭ್ಯ
ಅಂತರ ರಾಜ್ಯಗಳಿಂದ ನಗರ ಪ್ರದೇಶಗಳಿಗೆ ಮರಳುವವರಿಗೆ 14 ದಿನಗಳ ಕಾಲ ಸಾಂಸ್ಥಿಕ ಸಂಪರ್ಕ ತಡೆಯಲ್ಲಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಈ ಹಿಂದಿನ ಮಾರ್ಗಸೂಚಿಯಲ್ಲಿ ನೀಡಲಾಗಿದ್ದ ವಿನಾಯಿತಿಯನ್ನು ಈ ದಿನ ಸ್ವೀಕೃತವಾದ ಪರಿಷ್ಕೃತ ಮಾರ್ಗಸೂಚಿಯಲ್ಲಿ ಹಿಂಪಡೆಯಲಾಗಿದೆ.
ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯಂತೆ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಅಂತರ ರಾಜ್ಯದಿಂದ ಮರಳುವ ಎಲ್ಲಾ ಪ್ರಯಾಣಿಕರು ಸಹ 14 ದಿನಗಳ ಕಾಲ ಸಾಂಸ್ಥಿಕ ಸಂಪರ್ಕ ತಡೆಯಲ್ಲಿರುವುದು ಕಡ್ಡಾಯವಾಗಿರುತ್ತದೆ.
ಈ ಹಿಂದಿನ ವಿನಾಯಿತಿಯಂತೆ ಪ್ರಸ್ತುತ ನಗರ ಪ್ರದೇಶದಲ್ಲಿ ಗೃಹ ಸಂಪರ್ಕ ತಡೆಯಲ್ಲಿ ಇರುವವರನ್ನೂ ಸಹ ಸಾಂಸ್ಥಿಕ ಸಂಪರ್ಕ ತಡೆಗೆ ಸ್ಥಳಾಂತರಿಸಲಾಗುತ್ತದೆ.
ಈ ಉದ್ದೇಶಕ್ಕಾಗಿ ಕೊಡಗು ಜಿಲ್ಲೆಯಲ್ಲಿ ವಿವಿಧ ಇಲಾಖೆಯಡಿ ಬರುವ ಸರ್ಕಾರಿ ಹಾಸ್ಟೆಲ್ ಗಳು, 13 ಖಾಸಗಿ ಹೋಟೆಲ್ ಗಳನ್ನು ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಧಿಸೂಚಿಸಲಾಗಿದೆ. ಪಾವತಿ ಆಧಾರದ ಮೇಲೆ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.